ಬೆಂಗಳೂರು: ಸಿಲಿಕಾನ್ ಸಿಟಿಯ ಖಾಸಗಿ ಕಂಪನಿ ‘ಟೀಂ ಲೀಡರ್ ’ ಭಯಾನಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಮಹದೇವಪುರದಲ್ಲಿ ಈ ಘಟನೆ ನಡೆದಿದೆ. ಬೀದರ್ ಮೂಲದ ಜೀವನ್ ಅಂಬಾಟೆ ಆತ್ಮಹತ್ಯೆಗೆ ಶರಣಾದ ವ್ಯಕ್ತಿ.

ಇಂಟರ್ನೆಟ್ನಲ್ಲಿ ಸರ್ಚ್ ಮಾಡಿ ಸೂಸೈಡ್ ಮಾಡಿಕೊಂಡಮಾರ್ಚ್ 13ಎಂದು ಖಾಸಗಿ ಕಂಪನಿಯ ಉದ್ಯೋಗಿ ಜೀವನ್ ಅಂಬಾಟೆ ಭಯಾನಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ‘ಹೌ ಟು ಡೈ ಈಸಿಲಿ’, ಎಂದು ಸುಲಭವಾಗಿ ಸಾಯುವ ಬಗ್ಗೆ ಯುಟ್ಯೂಬ್‌ನಲ್ಲಿ ಹುಡುಕಾಡಿದ್ದ ಜೀವನ್ಗೆ ಗ್ಯಾಸ್ ಸಿಲಿಂಡರ್ನಲ್ಲಿ ಬರುವ ಮೊನಾಕ್ಸೈಡ್ ಮೂಲಕ ಸುಲಭವಾಗಿ ಸಾಯಬಹುದು ಎಂದು ಗೊತ್ತಾಗಿದೆ.

ಹೀಗಾಗಿ ಮುಖಕ್ಕೆ ಮಾಸ್ಕ್ ಧರಿಸಿ ಸಿಲಿಂಡರ್ ಪೈಪ್ನ ಮೂಗಿಗೆ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದೇಹದ ಒಳಗೆ ಮೊನಾಕ್ಸೈಡ್ ಹೋಗಿ ಕೂತಲ್ಲೇ ಜೀವನ್ ಪ್ರಾಣ ಕಳೆದುಕೊಂಡಿದ್ದಾನೆ.

ಗ್ಯಾಸ್ ಸಿಲಿಂಡರ್ ಮೂಲಕ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದ ಜೀವನ್, ತನ್ನ ಸಾವಿನ ನಂತರ ಮನೆಗೆ ಬರುವ ಮಂದಿಗೆ ಯಾವುದೇ ಪ್ರಾಣಾಪಾಯ ಆಗಬಾರದೆಂದು ಚಿಂತಿಸಿ ಮನೆಗೆ ಬರುವ ಜನರು ಏನೆಲ್ಲ ಮಾಡಬೇಕೆಂದು ತನ್ನ ಮನೆ ಬಾಗಿಲಿಗೆ ಡೈಯಾಗ್ರಾಮ್ ಅಂಟಿಸಿದ್ದ. ಮನೆ ಬಾಗಿಲು ಓಪನ್ ಮಾಡಿದ ತಕ್ಷಣ ಕಿಟಕಿ ಓಪನ್ ಮಾಡಿ. ಯಾರೂ ಲೈಟ್ಸ್ ಆನ್ ಮಾಡಬೇಡಿ ಎಂದು ಬರೆದಿದ್ದ. ಆತ್ಮಹತ್ಯೆ ಮಾಡಿಕೊಂಡ 3 ದಿನದ ಬಳಿಕ ಈ ಘಟನೆ ಬೆಳಕಿಗೆ ಬಂದಿತ್ತು.

ಜೀವನ್ ಫೋನ್ ರಿಸೀವ್ ಮಾಡದ ಹಿನ್ನೆಲೆಯಲ್ಲಿ ಅನುಮಾನಗೊಂಡ ಸ್ನೇಹಿತರು ಜೀವನ್ ಮನೆ ಬಳಿ ಬಂದು ನೋಡಿದಾಗ ಅನಾಹುತ ಬಯಲಾಗಿದೆ. ಡೆತ್‌ನೋಟ್ ಬರೆದಿಟ್ಟು ಜೀವನ್ ಆತ್ಮಹತ್ಯೆಗೆ ಶರಣಾಗಿದ್ದ. ಈ ಬಗ್ಗೆ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಯವರು ನನಗೆ ಫೋನ್ ಮಾಡ್ತಿಲ್ಲ, ನನ್ನ ಬಗ್ಗೆ ಕೇರ್ ಮಾಡ್ತಿಲ್ಲ, ಲೈಫ್ ಬ್ಯೂಟಿಫುಲ್ ಆಗಿರಬೇಕು ಎಂದು ಬೀದರ್ನಿಂದ ಬೆಂಗಳೂರಿಗೆ ಬಂದೆ. ಆದ್ರೆ ಇಲ್ಲಿ ನಾನು ಅಂದು ಕೊಂಡ ಹಾಗೇ ಏನು ನಡೀತಿಲ್ಲ. ಲೈಪು ಬೋರಾಗಿದೆ ಎಂದು ಜೀವನ್ ಡೆತ್ನೋಟ್ನಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.










