Tuesday, May 7, 2024
spot_imgspot_img
spot_imgspot_img

ವಾರ್ಷಿಕ ಪರೀಕ್ಷೆಯಲ್ಲಿ ಪುನೀತ್ ರಾಜ್ ಕುಮಾರ್ ಜೀವನದ ಬಗ್ಗೆ ಪ್ರಶ್ನೆ

- Advertisement -G L Acharya panikkar
- Advertisement -

ಬೆಂಗಳೂರು: ಪುನೀತ್ ರಾಜ್ ಕುಮಾರ್ ಹೆಸರನ್ನು ಅವರ ನಿಧನ ನಂತರ ಅಮರವಾಗಿಸುವ ನಿಟ್ಟಿನಲ್ಲಿ, ವೃತ್ತ, ರಸ್ತೆಗಳಿಗೆ ಅವರ ಹೆಸರಿನ್ನು ಇಡಲಾಗಿದೆ. ಇದಲ್ಲದೇ ಉಪಗ್ರಹಕ್ಕೂ ಅವರ ಹೆಸರಿನ್ನು ಇಡಲಾಗಿತ್ತು.ಈಗ 4ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿಯೂ ಅಪ್ಪು ಬಗ್ಗೆ ಪ್ರಶ್ನೆಯನ್ನು ಕೇಳಲಾಗಿದೆ. ಬೆಂಗಳೂರಿನ ವಿಜಯನಗರ ಬಳಿಯ ಆರ್ ಪಿ ಸಿ ಲೇಔಟ್ ನಲ್ಲಿರುವಂತ ದಿ ನ್ಯೂ ಕೇಂಬ್ರಿಡ್ಜ್ ಇಂಗ್ಲೀಷ್ ಶಾಲೆಯಲ್ಲಿ 4ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ಮಕ್ಕಳಿಗೆ ನೀಡಲಾಗಿದ್ದಂತ ವಾರ್ಷಿಕ ಪರೀಕ್ಷೆಯಲ್ಲಿ, ಪುನೀತ್ ರಾಜ್ ಕುಮಾರ್ ಕುರಿತಂತೆ ಪ್ರಶ್ನೆ ಕೇಳಲಾಗಿದೆ.

ಐಸಿಎಸ್‌ಇ ಪಠ್ಯಕ್ರಮದ 4ನೇ ತರಗತಿ ವಿದ್ಯಾರ್ಥಿಗಳ 2ನೇ ಭಾಷೆಯಾದಂತ ಕನ್ನಡ ಭಾಷಾ ಪರೀಕ್ಷೆಯಲ್ಲಿ ಪುನೀತ್ ರಾಜ್ ಕುಮಾರ್ ಕುರಿತಂತೆ ಗದ್ಯ ಭಾಗವನ್ನು ನೀಡಿ ಪ್ರಶ್ನೆ ಕೇಳಲಾಗಿದೆ. ಗದ್ಯ ಭಾಗವನ್ನು ಓದಿ, ಉತ್ತರಿಸುವಂತೆ ಸೂಚಿಸಿದ್ದಾಗಿ ತಿಳಿದು ಬಂದಿದೆ.

ಗದ್ಯಭಾಗದಲ್ಲಿ ತಿಳಿಸಿದ್ದಂತ ಪುನೀತ್ ರಾಜ್ ಕುಮಾರ್ ಬಗೆಗೆ ಪುನೀತ್ ರಾಜ್ ಕುಮಾರ್ ಅವರನ್ನು ಅಭಿಮಾನಿಗಳು ಏನೆಂದು ಕರೆಯುತ್ತಾ ಇದ್ದರು.? ಅವರು ಯಾವಾಗ ಜನಿಸಿದ್ರು..? ಅವರ ತಂದೆ ಹೆಸರೇನು.? ಎಂದು ಪ್ರಶ್ನೆಗಳನ್ನು ಕೇಳಲಾಗಿದೆ. ಇದಲ್ಲದೇ ಖಾಲಿ ಬಿಟ್ಟ ಸ್ಥಗಳನ್ನು ತುಂಬಿ ಎನ್ನುವಂತ ಪ್ರಶ್ನೆಗಳಲ್ಲಿ, ಪುನೀತ್ ರಾಜ್ ಕುಮಾರ್ — ಎಂದು ಖ್ಯಾತರಾಗಿದ್ದರು. ಪುನೀತ್ ರಾಜ್ ಕುಮಾರ್ ತಾಯಿಯ ಹೆಸರು — ಎಂದು ಪ್ರಶ್ನೆಗಳನ್ನು ಕೇಳಲಾಗಿತ್ತು.

- Advertisement -

Related news

error: Content is protected !!