- Advertisement -
- Advertisement -
ಬಂಟ್ವಾಳ: ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾ.ಪಂ. ವ್ಯಾಪ್ತಿಯ ಕಾಡಬೆಟ್ಟುವಿನ ಕುಟುಂಬವೊಂದರ ಹನ್ನೊಂದು ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದರು ಮಾಜಿ ಸಚಿವ ಬಿ.ರಮಾನಾಥ ರೈ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ದಿನ ಬಳಕೆಯ ಅಕ್ಕಿ, ಆಹಾರ ದಿನಸಿ,ಔಷಧಿ, ತರಕಾರಿ ವಸ್ತುಗಳನ್ನು ವಿತರಿಸಿ ನೆರವು ನೀಡಲಾಯಿತು.


ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಅವರು ಸಂತ್ರಸ್ತ ಮನೆ ಮಂದಿಗೆ ಸಾಂತ್ವನ ಹೇಳಿ, ಕೊರೊನಾ ಬಗ್ಗೆ ಭಯ ಬೇಡ, ಆದರೆ ಜಾಗೃತರಾಗಿರಿ. ಆಸ್ಪತ್ರೆ ವೈದ್ಯರ ಮಾರ್ಗದರ್ಶನದಂತೆ ಔಷಧ ಸೇವಿಸಿ ಭಯ ಮುಕ್ತರಾಗಿ ಎಂದು ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಎನ್‌ಎಸ್‌ಯುಐ ಅಧ್ಯಕ್ಷ ವಿನಯ್ ಬಿ.ಸಿ.ರೋಡ್, ಗೀತೇಶ್ ಬಡಕಬೈಲ್, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಗ್ರಾ.ಪಂ. ಸದಸ್ಯ ವೀರೇಂದ್ರ ಅಮೀನ್, ಉದ್ಯಮಿ ವಿಜಯ್ ಕುಮಾರ್ ಅಲ್ಲಿಪಾದೆ ಮತ್ತಿತರರು ಉಪಸ್ಥಿತರಿದ್ದರು.



- Advertisement -








