Monday, January 25, 2021

ಬಂಟ್ವಾಳ: ಧ್ವನಿ ಬೆಳಕು ಸಂಯೋಜಕರ ಒಕ್ಕೂಟದ ಮಹಾಸಭೆ:ಅಧ್ಯಕ್ಷರಾಗಿ ಶೇಖ್ ಸುಭಾನ್ ಮಂಗಳಪದವು ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಬನಾರಿ ಆಯ್ಕೆ

ಬಂಟ್ವಾಳ: ಧ್ವನಿ ಬೆಳಕು ಸಂಯೋಜಕರ ಒಕ್ಕೂಟ ಬಂಟ್ವಾಳ ತಾಲೂಕು ಇದರ ಮಹಾ ಸಭೆ ಲಯನ್ಸ್ ಸೇವಾ ಭವನ ಬಿ.ಸಿ ರೋಡ್ ನಲ್ಲಿ ಒಕ್ಕೂಟದ ಅಧ್ಯಕ್ಷ ಶೇಖ್ ಸುಬಾನ್ ಮಂಗಳಪದವು ಇವರ ಅಧ್ಯಕ್ಷತೆಯಲ್ಲಿ ಜರುಗಿತು.


ಹಾಗೂ ದೀಪಾಲಾಂಕಾರ ಮಾಲಕ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ರಾಜಶೇಖರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು ಕಾರ್ಯಕ್ರಮದಲ್ಲಿ ಸಂತೋಷ್ ಕನ್ಯಾನ ಸ್ವಾಗತಿಸಿದರು ಕಾರ್ಯದರ್ಶಿ ಇಸ್ಮಾಯಿಲ್ ಬನಾರಿಯವರು ವರದಿ ಮಂಡಿಸಿದರು ಕೋಶಾಧಿಕಾರಿ ಸಂತೋಷ್ ಕನ್ಯಾನ ಲೆಕ್ಕ ಪತ್ರ ಮಂಡಿಸಿದರು.


2020 – 2021 ನೇ ಸಾಲಿನ ಅಧ್ಯಕ್ಷರಾಗಿ ಶೇಖ್ ಸುಭಾನ್ ಮಂಗಳಪದವು, ಉಪಾಧ್ಯಕ್ಷರಾಗಿ ಮಹಮ್ಮದ್ ತಾಹಿರಾ, ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಬನಾರಿ, ಜೊತೆ ಕಾರ್ಯದರ್ಶಿಯಾಗಿ ಲಿಂಗಪ್ಪ ಡಿ.ಜೆ, ಉದಯ ಬಂಟ್ವಾಳ, ಕೋಶಾಧಿಕಾರಿಯಾಗಿ ಸಂತೋಷ್ ಕನ್ಯಾನ, ಗೌರವ ಸಲಹೆಗಾರರಾಗಿ ರಾಜಶೇಖರ ಶೆಟ್ಟಿ, ಧನ್ ರಾಜ್ ಸಾಯಿಜನರೇಟರ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರಶಾಂತ್ ಕುಂಡಡ್ಕ, ವಸಂತ ಮಾಣಿ, ನಾರಾಯಣ ಕುಕ್ಕಾಜೆ, ಜಯಪ್ರಕಾಶ್, ಪ್ರಶಾಂತ್ ಅಜಿಲಮೊಗರು, ದಿವ್ಯರಾಜ್ ಹರೀಶ್, ಸಂತೋಷ್ ಸುವರ್ಣ ಕುರಿಯಾಳ, ಜಯಕ್ರಷ್ಣ ಕನ್ಯಾನ ಸಂಘಟನ ಕಾರ್ಯದರ್ಶಿಗಳು – ಸತೀಶ್ ವಗ್ಗ, ಗಂಗಾಧರ ಮಂಚಿ , ಹಾಗೂ ಕುಶಲ್ ರಾಜ್ ಪಾಣೆಮಂಗಳೂರು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿ ಇಸ್ಮಾಯಿಲ್ ಬನಾರಿಯವರು ವಂದಿಸಿದರು

- Advertisement -

MOST POPULAR

HOT NEWS

Related news

LEAVE A REPLY

Please enter your comment!
Please enter your name here

error: Content is protected !!