Thursday, September 10, 2026
spot_imgspot_img
spot_imgspot_img

ಬಂಟ್ವಾಳ: ಮನೆಯೊಂದರಲ್ಲಿ ಅಂದರ್ ಬಾಹರ್ ಆಡುತ್ತಿದ್ದ 12 ಮಂದಿ ವಶಕ್ಕೆ!

- Advertisement -
- Advertisement -

ಬಂಟ್ವಾಳ: ಖಚಿತ ಮಾಹಿತಿ ಮೇರೆಗೆ ಮನೆಯೊಂದರಲ್ಲಿ ಹಣವನ್ನು ಪಣಕ್ಕಿಟ್ಟು ಅಂದರ್ ಬಾಹರ್ ಆಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ 12 ಜನರನ್ನು ವಶಕ್ಕೆ ಪಡೆದ ಘಟನೆ ಜು.25 ರಂದು ಬಂಟ್ವಾಳ ತಾಲೂಕು ನಾವೂರು ಗ್ರಾಮದ ಬಡಗುಂಡಿಯಲ್ಲಿ ನಡೆದಿದೆ.

ಕೃಷ್ಣ ಪೂಜಾರಿ, ರೋಹಿತಾಶ್ವ, ಗೋಪಾಲ, ಸತೀಶ ಮೂಲ್ಯ, ವಿಜಯ ಫೆರ್ನಾಂಡಿಸ್‌, ವಿಶ್ವಾಸ್‌ ಭಂಡಾರಿ, ಗಂಗಾಧರ ಪೂಜಾರಿ, ಕೃಷ್ಣಪ್ಪ, ಶಿವಪ್ರಸಾದ್‌, ಮೊಹಮ್ಮದ್‌ ಶರೀಫ್‌, ಮೊಹಮ್ಮದ್‌ ಅಶ್ರಫ್‌, ರಿಯಾಝ್‌ ಬಂಧಿತ ಆರೋಪಿಗಳಾಗಿದ್ದಾರೆ.

ಅಂದರ್ ಬಾಹರ್ ಆಡುವುದಕ್ಕೆ ಬಳಸಿದ ನಗದು 45,000 ರೂ, 12 ಮೊಬೈಲ್‌ ಫೋನ್‌ ಗಳು ಅಂದಾಜು 40,000 ರೂ, 4 ಬೈಕ್‌ ಗಳು ಅಂದಾಜು ಮೌಲ್ಯ 1,20,000 ರೂ, 1 ಓಮ್ನಿ ವಾಹನ ಅಂದಾಜು ಮೌಲ್ಯ 50,000 ರೂ, 1 ಆಟೋರಿಕ್ಷಾ ಅಂದಾಜು ಮೌಲ್ಯ 40,000 ರೂ ವಶಕ್ಕೆ ಪಡೆದಿದ್ದು, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಯೊಂದರಲ್ಲಿ ಅಕ್ರಮವಾಗಿ ಹಣವನ್ನು ಪಣಕ್ಕಿಟ್ಟು ಅಂದರ್ ಬಾಹರ್ ಆಡುತ್ತಿದ್ದಾರೆ ಎಂದು ಮಾನ್ಯ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು, ದ.ಕ ಜಿಲ್ಲೆ ಮಂಗಳೂರು ರವರಿಗೆ ಬಂದ ಮಾಹಿತಿಯ ಮೇರೆಗೆ ಮಾನ್ಯ ಪೊಲೀಸ್‌ ಅಧೀಕ್ಷಕರು, ದ.ಕ ಜಿಲ್ಲೆ ಮಂಗಳೂರು ರವರ ಮಾರ್ಗದರ್ಶನದಲ್ಲಿ ದಕ್ಷಿಣ ಕನ್ನಡ ಮಹಿಳಾ ಪೊಲೀಸ್‌ ಠಾಣೆ ನಿರೀಕ್ಷಕರಾದ ಶ್ರೀ ತಿಮ್ಮಪ್ಪ ನಾಯ್ಕ್‌ ರವರು ಮಾನ್ಯ ಪೊಲೀಸ್‌ ಉಪಾಧೀಕ್ಷಕರು, ಬಂಟ್ವಾಳ ಉಪವಿಭಾಗ ರವರಿಂದ ಸರ್ಚ್‌ ವಾರಂಟ್‌ ಪಡೆದು ದಾಳಿನಡೆಸಿದ್ದಾರೆ.

- Advertisement -

Related news

error: Content is protected !!