Sunday, June 14, 2026
spot_imgspot_img
spot_imgspot_img

ಬೆಳ್ತಂಗಡಿ: ನಟ ಯಶ್‌ ದಂಪತಿ ಸೂರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

- Advertisement -
- Advertisement -

ಬೆಳ್ತಂಗಡಿ: ಮಣ್ಣಿನ ಹರಕೆಯ ಕ್ಷೇತ್ರವೆಂದೇ ಪ್ರಸಿದ್ದವಾದ ಸೂರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ರಾಕಿಂಗ್‌ ಸ್ಟಾರ್‌ ಯಶ್‌ ಅವರು ಕುಟುಂಬ ಸಮೇತ ಭೇಟಿ ನೀಡಿ ದೇವರ ದರ್ಶನ ಪಡೆದರು.

ಪತ್ನಿ ರಾಧಿಕಾ ಪಂಡಿತ್ ಮಕ್ಕಳಾದ ಐರಾ ಹಾಗೂ ಯಥರ್ವ್ ಜೊತೆ ಸೂರ್ಯ ಸದಾಶಿವ ರುದ್ರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ತಮ್ಮ ಹರಕೆ ತೀರಿಸಲು ದಂಪತಿ ಬಂದಿದ್ದರು ಎನ್ನಲಾಗಿದೆ. ಮಣ್ಣಿನ ರೀಲ್ ಮತ್ತು ಕುಟುಂಬದ ಮಣ್ಣಿನ ಹರಕೆಯನ್ನು ಯಶ್ ದಂಪತಿ ತೀರಿಸಿದ್ದಾರೆ. ಹರಕೆ ಮಂಡೆ ಬಳಿ ತೆರಳಿ ಹರಕೆ ತೀರಿಸಿದ್ದಾರೆ. ಇದೇ ವೇಳೆ ಟಾಕ್ಸಿಕ್ ಚಲನಚಿತ್ರದ ಡೈರೆಕ್ಟರ್ ವೆಂಕಟ್ ಯಶ್ ದಂಪತಿಗೆ ಸಾಥ್ ನೀಡಿದ್ದಾರೆ.

ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವರ ದರ್ಶನದ ಬಳಿಕ ನಟ ಯಶ್, ನಟಿ ರಾಧಿಕಾ ಪಂಡಿತ್ ಹಾಗೂ ಮಕ್ಕಳು ಅನ್ನಪೂರ್ಣ ಛತ್ರದಲ್ಲಿ ಊಟ ಮಾಡಿ ತೆರಳಿದರು.

- Advertisement -

Related news

error: Content is protected !!