- Advertisement -
- Advertisement -



ಬೆಂಗಳೂರು : ಕೌಟುಂಬಿಕ ಕಲಹ ಹಾಗೂ ಅನೈತಿಕ ಸಂಬಂಧದ ಶಂಕೆಯಿಂದ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪತಿಯೇ ಹತ್ಯೆ ಮಾಡಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಕುಳ್ಳೇಗೌಡನಪಾಳ್ಯದಲ್ಲಿ ನಡೆದಿದೆ.
ಸಿಂಚನ(21) ಕೊಲೆಯಾದ ಮಹಿಳೆ, ರೇಣುಕಯ್ಯ ಕೊಲೆಗೈದ ಪತಿ. ಪತ್ನಿಯ ಶೀಲ ಶಂಕಿಸಿ ಆಗಾಗ್ಗೆ ರೇಣುಕಯ್ಯ ಗಲಾಟೆ ಮಾಡುತ್ತಿದ್ದು, ಅದರಂತೆ ಶುಕ್ರವಾರವೂ(ಫೆ.20) ಕೂಡ ಗಲಾಟೆ ನಡೆಸಿ ಮನೆ ಮುಂದೆಯೇ ಕಲ್ಲು ಎತ್ತಿ ಹಾಕಿ ಸಿಂಚನಾಳನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಬಳಿಕ ಆತ ಅಲ್ಲಿಂದ ಪರಾರಿಯಾಗಿದ್ದು, ಕಗ್ಗಲೀಪುರ ಪೊಲೀಸರು ಪ್ರಕರಣ ದಾಖಲಿಕೊಂಡು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.
- Advertisement -








