Thursday, September 10, 2026
spot_imgspot_img
spot_imgspot_img

ಧಾರ್ಮಿಕ ಭಾವನೆ ಕೆರಳಿಸುವ ಕೃತ್ಯದ ಸೂತ್ರಧಾರಿಗಳನ್ನು ಬಂಧಿಸಿ – ಬಿಜೆಪಿ ಎಸ್.ಸಿ ಮೋರ್ಚಾ ಆಗ್ರಹ

- Advertisement -
- Advertisement -

ಮಂಗಳೂರು : ಮಂಗಳೂರಿನ ಅತ್ತಾವರ ಬಾಬುಗುಡ್ಡೆಯಲ್ಲಿ ಶ್ರೀ ಬಬ್ಬುಸ್ವಾಮಿ ಕ್ಷೇತ್ರ ಹಾಗೂ ಶ್ರೀ ದೇವರಾಜ ಕೋರ್ದಬ್ಬು ಕ್ಷೇತ್ರದ ಕಾಣಿಕೆ ಡಬ್ಬಿಯಲ್ಲಿ ಹಿಂದೂ ದೇವತೆಗಳ ಕುರಿತು ಅವಹೇಳನಕಾರಿ ಬರಹ ಬೆರೆದು ಕೋಮು ಭಾವನೆ ಕೆರಳಿಸುವವರ ಬಂಧನಕ್ಕೆ ಮಂಗಳೂರು ನಗರ ದಕ್ಷಿಣ ಬಿಜೆಪಿ ಎಸ್.ಸಿ ಮೋರ್ಚಾ ಆಗ್ರಹಿಸಿದೆ.

ಪರಿಶಿಷ್ಟ ಜಾತಿ ಹಾಗೂ ಮುಂಡಾಲ‌ ಸಮಾಜವು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆರಾಧಿಸಿಕೊಂಡು ಬಂದಿರುವ‌ ಕ್ಷೇತ್ರವನ್ನು ಅಪವಿತ್ರಗೊಳಿಸುವ ಉದ್ಧೇಶದಿಂದ ಇಂತಹ ಕೃತ್ಯ ಮಾಡಲಾಗಿದೆ. ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಜರಗಿಸಬೇಕೆಂದು ಎಸ್.ಸಿ ಮೋರ್ಚಾ ಅದ್ಯಕ್ಷರಾದ ರಘವೀರ್ ಬಾಬುಗುಡ್ಡೆ ಆಗ್ರಹಿಸಿದ್ದಾರೆ.

ಈಗಾಗಲೇ ಈ ಘಟನೆಯ ಕುರಿತು ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಸಮಾಜದ ಧಾರ್ಮಿಕ ಭಾವನೆಗಳ ಚೆಲ್ಲಾಟವಾಡುವ ಕಿಡಿಗೇಡಿಗಳಿಗೆ ಕಾನೂನಿನಡಿ ಕ್ರಮ ಜರಗಿಸಲು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.

- Advertisement -

Related news

error: Content is protected !!