Thursday, June 18, 2026
spot_imgspot_img
spot_imgspot_img

ವೃಂದಾವನಸ್ಥ ಪೇಜಾವರ ಶ್ರೀ ವಿಶ್ವೇಶತೀರ್ಥರ ಸ್ಮರಣಾರ್ಥ ರೆಡ್ ಕ್ರಾಸ್ ಸಹಯೋಗದಲ್ಲಿ ಶಿವಳ್ಳಿ ಸ್ಪಂದನದ ರಕ್ರದಾನ ಶಿಬಿರ.

- Advertisement -
- Advertisement -

ಮಂಗಳೂರು: ಇಂದು ಕೊಡಿಯಾಲ್‌ಬೈಲ್‌ನಲ್ಲಿರುವ ಶಾರದಾ ವಿದ್ಯಾಲಯದಲ್ಲಿ, ಶಿವಳ್ಳಿ ಸ್ಪಂದನದ ರಕ್ತದಾನ ಶಿಬಿರ 200 ಜನ ರಕ್ತದಾನ ಮಾಡಿ ಅತ್ಯಂತ ಯಶಸ್ವಿಯಾಯಿತು. ಈ ರಕ್ತದಾನ ವೃಂದಾವನಸ್ಥ ಪೇಜಾವರ‌ ಶ್ರೀಗಳು ಶ್ರೀ ಶ್ರೀ ವಿಶ್ವೇಶ ತೀರ್ಥರ ಸಂಸ್ಮರಣೆಯ ಪ್ರಯುಕ್ತ ರೆಡ್ ಕ್ರಾಸ್ ಸಹಯೋಗದಲ್ಲಿ ನಡೆಯಿತು.

ಬೆಳಿಗ್ಗೆ 9.00 ಗಂಟೆಗೆ ಸುಧಾಕರ್ ರಾವ್ ಪೇಜಾವರರು ಶಿವಳ್ಳಿ‌ ಸ್ಪಂದನ ತಾಲೂಕು ಕಾರ್ಯದರ್ಶಿ ಗಣೇಶ ಹೆಬ್ಬಾರ್, ವಲಯಾದ್ಯಕ್ಷ ನಾರಾಯಣ ಭಟ್ ಹಾಗೂ ಇತರ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿದರು. ರೆಡ್ ಕ್ರಾಸ್‌ನ ಪ್ರವೀಣ ಸಾಲಿಯಾನ್ ಉಪಸ್ಥಿತರಿದ್ದರು.

ಮಂಗಳೂರಿನ ಶಿವಳ್ಳಿ ಸ್ಪಂದನದ‌ 12 ವಲಯಗಳ ಪದಾಧಿಕಾರಿಗಳು, ಸದಸ್ಯರು ಮಹಿಳೆಯರೂ ಸೇರಿದಂತೆ ಎಲ್ಲರಲ್ಲೂ ರಕ್ತದಾನದಲ್ಲಿ ಭಾರೀ ಉತ್ಸಾಹ ಕಂಡು ಬಂತು. ನೂರಾರು ಮಂದಿ ರಕ್ತದಾನ‌ ಮಾಡಲು‌ ಬಂದು, ಸರತಿಯಲ್ಲಿ ನಿಂತು ರಕ್ತದಾನ‌ ಮಾಡಿದ್ದು,‌ ಜನರ ಸಾಮಾಜಿಕ ಕಳಕಳಿ ಕಣ್ಣಿಗೆ ಕಟ್ಟಿದಂತಿತ್ತು.

ಈ ನಡುವೆ ಪೇಜಾವರ ಶ್ರೀಗಳ ಸಂಸ್ಮರಣೆಗಾಗಿ‌ ಸಭಾ ಕಾರ್ಯಕ್ರಮ ಶಾರದಾ ವಿದ್ಯಾಲಯದ ಧ್ಯಾನ‌ ಮಂದಿರದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರು, ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಎಂ ಬಿ ಪುರಾಣಿಕ್ ಮಾತನಾಡಿ, ಪೇಜಾವರ ಶ್ರೀಗಳು ವಾಯುದೇವರ‌ ಅವತಾರವಾಗಿದ್ದರು ಎಂದು ಶಿವಳ್ಳಿ‌ ಬ್ರಾಹ್ಮಣ ಸಮುದಾಯದ ಒಗ್ಗೂಡುವಿಕಯನ್ನು ಪ್ರಶಂಸಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಶ್ರೀ ಪ್ರದೀಪ ಕುಮಾರ ಕಲ್ಕೂರ ಮಾತನಾಡಿ ಸದಾ ಸಮಾಜದ ಏಳಿಗೆಗಾಗಿ‌ ಶ್ರಮಿಸಿದ ಸ್ವಾಮಿಜಿಯ‌ ನೆನಪಿಗೆ ಇಂದು ರಕ್ತದಾನದ ಮೂಲಕ ರಕ್ತ ತರ್ಪಣ‌ ಎಂದು ಹೇಳಿ, ದಾನಿಗಳನ್ನು ಪ್ರಶಂಸಿಸಿದರು.

ಈ‌ ಸಂದರ್ಭದಲ್ಲಿ ಹಿರಿಯ ವೈದ್ಯ ಡಾ. ಪ್ರಭಾಕರ ರಾವ್‌ ಅವರನ್ನು ಅವರ ಕೊಡುಗೆಗಾಗಿ ಸನ್ಮಾನಿಸಲಾಯಿತು. ಅತಿಥಿಗಳನ್ನು ಆತಿಥೇಯ ಶಿವಳ್ಳಿ ಸ್ಪಂದನ‌ ಅಶೋಕ ನಗರ‌ ವಲಯದ‌ ಅಧ್ಯಕ್ಷರ ಶ್ರೀ ನಾರಾಯಣ ಭಟ್ ಸ್ವಾಗತಿಸಿದರು. ತಾಲೂಕು ಕಾರ್ಯದರ್ಶಿ ಶ್ರೀ ಗಣೇಶ ಹೆಬ್ಬಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಶಿವಳ್ಳಿ‌ ಸ್ಪಂದನ ತನ್ನ ಸಾಮಾಜಿಕ ಬದ್ದತೆಯನ್ನು ಸದಾ‌ ಎತ್ತಿ‌ಹಿಡಿದು ಸಮಾಜಕ್ಕೆ ಆದರ್ಶ ಪ್ರಾಯವಾಗಲಿದೆ ಹಾಗೂ ಇದಕ್ಕೆ ಸಮಾಜ ಬಂಧುಗಳ ರಕ್ತದಾನದಲ್ಲಿನ‌ ಉತ್ಸಾಹವೇ‌ ಸಾಕ್ಷಿ ಎಂದರು. ಅಧ್ಯಕ್ಷರು‌ ಶ್ರೀ ಕೃಷ್ಣ ಭಟ್‌ ಮಾತನಾಡಿ‌ ಸದಸ್ಯರ‌ ಉತ್ಸಾಹವನ್ನು ಕೊಂಡಾಡಿದರು. ಅಶೋಕನಗರ ವಲಯದ ಸಂಘಟನಾ ಕಾರ್ಯದರ್ಶಿ ಶ್ರೀ ಅರುಣ್ ಕುಮಾರ್ ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮವನ್ನು ವಲಯ‌ ಕಾರ್ಯದರ್ಶಿ ಶ್ರೀ ಪ್ರಶಾಂತ ಉಪಾಧ್ಯಾಯ ಅಚ್ಚುಕಟ್ಟಾಗಿ ನಿರ್ವಹಿಸಿದರು. ಅತಿಥಿಗಳು‌ ವೃಂದಾವನಸ್ಥ ಶ್ರೀಗಳಿಗೆ ಪುಷ್ಪಾಂಜಲಿ‌ ಅರ್ಪಿಸಿದರು.ರ

ರಕ್ತದಾನ ಶಿಬಿರವು‌ ಮಧ್ಯಾಹ್ನ ಎರಡು ಗಂಟೆಯವರೆಗೆ‌ ನಡೆದು ಬರೋಬ್ಬರಿ‌ ಇನ್ನೂರು ಮಂದಿ ರಕ್ತದಾನ‌ ಮಾಡಿದರು.

ನಿಮ್ಮೆಲ್ಲರ ಈ ಉದಾತ್ತ‌ ಮನೋಭಾವ ನನ್ನನ್ನು ಮೂಕವಿಸ್ಮಿತನನ್ನಾಗಿ ಮಾಡಿದೆ. ಇಂದುಅನಿವಾರ್ಯ ಕಾರಣಗಳಿಂದ ನಮ್ಮ ಜತೆಗಿರಲು‌ ಸಾಧ್ಯವಾಗದವರು ಮುಂದೆ ಖಂಡಿತವಾಗಿ‌ ನಮ್ಮ ಜತೆ‌ ಇರುವಿರೆಂಬ ನಂಬಿಕೆ ನಮಗಿದೆ. ಪ್ರತೀ ವಲಯಗಳಿಂದ ಬಂದ ಪ್ರತಿಕ್ರಿಯೆ‌ ನಮ್ಮ ಸಂಘಟನೆಯನ್ನು ಮತ್ತಷ್ಟು ಬಲಿಷ್ಟವಾಗಿಸಿದೆ. ಈ ಸಂಘಟನೆ ನಿಮ್ಮಿಂದ, ನಿಮ್ಮದು, ನಿಮಗಾಗಿ. ಸದಾ ನಮ್ಮ ಸಮಾಜದ ಒಳಿತಿಗಾಗಿ ಎಲ್ಲರೂ ಮುಂದೆಯೂ ಜತೆಯಾಗಿ ಸಾಗೋಣ

ಇಂದಿನ‌ ರಕ್ತದಾನ ಶಿಬಿರ ಅತ್ಯಂತ ಯಶಸ್ಚಿಯಾಗಲು‌ ಪ್ರತ್ಯಕ್ಷ‌ ಹಾಗೂ ಪರೋಕ್ಷವಾಗಿ ಕಾರಣರಾದ ಎಲ್ಲರಿಗೂ ಮತ್ತೊಮ್ಮೆ ವಂದನೆಗಳು.

ಗಣೇಶ ಹೆಬ್ಬಾರ್

- Advertisement -

Related news

error: Content is protected !!