- Advertisement -
- Advertisement -




ಬಂಟ್ವಾಳ : ತೆಂಗಿನ ಕಾಯಿ ಕೀಳುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ಕಬ್ಬಿಣದ ದೋಂಟಿ ತಗುಲಿ 15 ವರ್ಷದ ಬಾಲಕ ಮೃತಪಟ್ಟ ಘಟನೆ ನಡೆದಿದೆ.
ಬಂಟ್ವಾಳ ಕೆದಿಲ ನಿವಾಸಿ ಜಿ. ಮಾಯಬ್ಬ @ ಪುತ್ತಾಕ(67) ಅವರ ದೂರಿನಂತೆ, ಮನೆಯ ಎದುರಿನ ಅಬ್ಬಾಸ್ ಎಂಬವರ ಜಾಗದಲ್ಲಿ ತೆಂಗಿನ ಕಾಯಿ ಕೀಳುವ ವೇಳೆ ದೂರುದಾರರು, ನೇರಳಕಟ್ಟೆಯ ಉಸ್ಮಾನ್ ಹಾಗೂ ಮೊಮ್ಮಗ ಮುಹಮ್ಮದ್ ಶಹೀರ್ (15) ಎಂಬವರ ಜತೆ ತೆಂಗಿನಕಾಯಿ ಕೀಳಲು ಹೋದಾಗ ಮುಹಮ್ಮದ್ ಶಹೀರ್ ಕಬ್ಬಿಣದ ದೋಂಟಿಯಿಂದ ಕಾಯಿ ಕೀಳಲು ಯತ್ನಿಸಿದ್ದಾನೆ. ಈ ವೇಳೆ ಆಕಸ್ಮಿಕವಾಗಿ ದೋಂಟಿ ವಿದ್ಯುತ್ ತಂತಿಗೆ ತಾಗಿ ವಿದ್ಯುತ್ ಪ್ರವಹಿಸಿದ್ದು, ಶಹೀರ್ ದೋಂಟಿ ಸಮೇತ ನೆಲಕ್ಕೆ ಬಿದ್ದಿದ್ದಾನೆ.
ವಿದ್ಯುತ್ ಸ್ಪರ್ಶಗೊಂಡ ಪರಿಣಾಮ ದೇಹಕ್ಕೆ ಸುಟ್ಟ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 07/2026, ಕಲಂ 194 ಬಿ.ಎನ್.ಎಸ್. ಪ್ರಕರಣ ದಾಖಲಾಗಿದೆ.
- Advertisement -








