- Advertisement -
- Advertisement -

ಹೊಸದಿಲ್ಲಿ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವುಂಟಾಗಿರುವುದರಿಂದ, ಮಾನ್ಸೂನ್ ಮತ್ತೆ ಪ್ರಾರಂಭಗೊಳ್ಳುವ ಸೂಚನೆ ದೊರೆತಿದೆ. ಇದರಿಂದಾಗಿ, ತೇವಾಂಶವು ಬಂಗಾಳ ಕೊಲ್ಲಿಯಿಂದ ಭಾರತದ ಇತರ ಭಾಗಗಳಲ್ಲೂ ಹರಡತೊಡಗಿದೆ.
ವಾಯುಭಾರ ಕುಸಿತದಿಂದಾಗಿ ಹಲವಾರು ದಿನಗಳ ಕಾಲ ಮಳೆಯಾಗುವ ನಿರೀಕ್ಷೆ ಇದ್ದು, ಸೆಪ್ಟೆಂಬರ್ 12ರಿಂದ 15ರ ನಡುವೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.ದಕ್ಷಿಣ ಒಡಿಶಾ ಮತ್ತು ಉತ್ತರ ಆಂಧ್ರಪ್ರದೇಶದ ಕರಾವಳಿ ಸಮೀಪದ ಬಂಗಾಳ ಕೊಲ್ಲಿಯ ವಾಯುವ್ಯ ಹಾಗೂ ಮಧ್ಯ ಪಶ್ಚಿಮ ಭಾಗದಲ್ಲಿ ವಾಯುಭಾರ ಕುಸಿತವುಂಟಾಗಿದೆ.ಸದ್ಯ ಈ ಮಾರುತಗಳು ಪಶ್ಚಿಮದಿಂದ ವಾಯುವ್ಯ ದಿಕ್ಕಿನತ್ತ ಚಲಿಸುವ ನಿರೀಕ್ಷೆ ಇದ್ದು ಇಡೀ ದೇಶಾದ್ಯಂತ ವ್ಯಾಪಿಸುವ ಸಾಧ್ಯತೆ ಇದೆ.
ಇದರಿಂದಾಗಿ ಕೇಂದ್ರ ಮತ್ತು ಪಶ್ಚಿಮ ಪ್ರಾಂತ್ಯಗಳಲ್ಲಿನ ಹವಾಮಾನದ ಮೇಲೆ ಪರಿಣಾಮವುಂಟಾಗಲಿದೆ ಎಂದು ಹೇಳಲಾಗಿದೆ.ಇದರೊಂದಿಗೆ ವಾಯುವ್ಯ ಮಾನ್ಸೂನ್ ಅಂತಿಮ ಘಟಕ್ಕೆ ತಲುಪಲಿದೆ.
- Advertisement -








