- Advertisement -
- Advertisement -


ಬಳ್ಳಾರಿ: ಈಜಲು ತೆರಳಿದ್ದ ಬಾಲಕನೋರ್ವ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ರಾರಾವಿ ಗ್ರಾಮದ ಬಳಿಯಲ್ಲಿನ ವೇದಾವತಿ ನದಿಯಲ್ಲಿ ನಡೆದಿದೆ.
ರಾರಾವಿ ಗ್ರಾಮದ 10ನೇ ತರಗತಿಯಲ್ಲಿ ಓದುತ್ತಿದ್ದ ಓಂ ಪ್ರಸಾದ್ (15) ಮೃತ ಬಾಲಕ. ಓಂ ಪ್ರಸಾದ್, ಶಾಲೆಗೆ ರಜೆ ಹಿನ್ನೆಲೆ ಮಂಗಳವಾರ ಸಂಜೆ ಸ್ನೇಹಿತರ ಜೊತೆ ವೇದಾವತಿ ನದಿಗೆ ಈಜಾಡಲು ತೆರಳಿದ್ದ. ನೀರಿನ ಆಳ ಅರಿಯದೇ ನದಿಗೆ ಇಳಿದಾಗ, ನದಿಯ ನೀರಿನ ಸೆಳೆತಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿದ್ದ ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಅಗ್ನಿ ಶಾಮಕ ಸಿಬ್ಬಂದಿ ಜೊತೆ ಸ್ಥಳೀಯರೂ ಸೇರಿ ಶೋಧ ಕಾರ್ಯ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ ಇಂದು ಬೆಳಗ್ಗೆ ಬಾಲಕನ ಮೃತದೇಹ ಪತ್ತೆಯಾಗಿದೆ.
ಘಟನೆ ಸಂಬಂಧ ಸಿರಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
- Advertisement -








