




ಚಂದಳಿಕೆ: ದ.ಕ.ಜಿಲ್ಲಾ ಶಾಮಿಯಾನ ಮಾಲಕರ ಸಂಘ (ರಿ.) ವಿಟ್ಲ ಘಟಕ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಆ.19-08-2025ನೇ ಮಂಗಳವಾರ ಬೆಳಗ್ಗೆ 11.30ಕ್ಕೆ ‘ಭಾರತ ಅಡಿಟೋರಿಯಂ’ ಚಂದಳಿಕೆ, ವಿಟ್ಲ ಇಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ಶಾಮಿಯಾನ ಮಾಲಕರ ಸಂಘ (ರಿ.) ಜಿಲ್ಲಾಧ್ಯಕ್ಷ ಬಾಬು ಕೆ. ವಿಟ್ಲ ಅಧ್ಯಕ್ಷತೆ ವಹಿಸಲಿದ್ದಾರೆ. ವಿಟ್ಲ ಪೊಲೀಸ್ ಠಾಣೆ (ಕಾನೂನು ಮತ್ತು ಸುವ್ಯವಸ್ಥೆ) ಪೊಲೀಸ್ ಉಪನಿರೀಕ್ಷಕ ರಾಮಕೃಷ್ಣ, ದ.ಕ.ಜಿಲ್ಲಾ ವಿದ್ಯುತ್ ಗುತ್ತಿಗೆದಾರರ ಸಂಘ (ರಿ.) ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಅಡ್ಯಂತಾಯ, ವಿಟ್ಲ ನೋಟರಿ ವಕೀಲ ಬೂಬಕ್ಕರ್, ದ.ಕ.ಜಿಲ್ಲಾ ಶಾಮಿಯಾನ ಮಾಲಕರ ಸಂಘ (ರಿ.) ಕಾರ್ಯದರ್ಶಿ ಪಿಯೂಷ್ ಮ್ಯಾಕ್ಸಿಮ್ ಸಿಕ್ವೆರಾ, ದ.ಕ.ಜಿಲ್ಲಾ ಶಾಮಿಯಾನ ಮಾಲಕರ ಸಂಘ (ರಿ.) ಕೋಶಾಧಿಕಾರಿ ನಿಶಿತ್ ಪೂಜಾರಿ, ಭಾರತ ಅಡಿಟೋರಿಯಂ ಚಂದಳಿಕೆ ವಿಟ್ಲ ಮಾಲಕ ಲ। ಸಂಜೀವ ಪೂಜಾರಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.

ವಿಶೇಷ ಸೂಚನೆ:
*ಅದೇ ದಿನ ಬೆಳಿಗ್ಗೆ 8.30ರಿಂದ ಶಾಮಿಯಾನ ಮಾಲಕರಿಗೆ ಹಾಗೂ ಶಾಮಿಯಾನ ಕಾರ್ಮಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿರುವುದು.
*ಸಂಘದ ಸದಸ್ಯರಿಗೆ ಮತ್ತು ಕಾರ್ಮಿಕರಿಗೆ ಅಂಚೆ ಇಲಾಖೆಯ ವಿಮಾ ಸೌಲಭ್ಯ ಒದಗಿಸಿಕೊಡುವ ವ್ಯವಸ್ಥೆ ಇದ್ದು ಇದರ ಸದುಪಯೋಗ ಪಡೆದುಕೊಳ್ಳಬಹುದು.
*ವಿಮಾ ಸೌಲಭ್ಯಕ್ಕೆ ಬೇಕಾಗುವ ದಾಖಲೆಗಳು
1)ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ
2)ನಾಮಿನಿ ಹೆಸರು ಮತ್ತು ಆಧಾರ್ ಸಂಖ್ಯೆ








