Tuesday, April 23, 2024
spot_imgspot_img
spot_imgspot_img

BIG BLAST:-ದಕ್ಷಿಣ ಕನ್ನಡದಲ್ಲಿ 166 , ಉಡುಪಿ 246 ಮಂದಿಗೆ ಕೊರೊನಾ ಸೋಂಕು : ರಾಜ್ಯದಲ್ಲಿ ಇಂದು 6670 ಮಂದಿಗೆ ಸೋಂಕು..!*

- Advertisement -G L Acharya panikkar
- Advertisement -

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರಿಸಿದೆ. ಇಂದು ಒಂದೇ ದಿನ 6670 ಮಂದಿ ಮೇಲೆ ಅಟ್ಯಾಕ್ ಮಾಡಿದೆ. ಅಲ್ಲದೇ, 101 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 164924 ಕ್ಕೆಏರಿಕೆಯಾಗಿದೆ.ರಾಜ್ಯದಲ್ಲಿ    ಈವರೆಗೆ 84232 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ಇಂದು ಸಿಲಿಕಾನ್ ಸಿಟಿಯಲ್ಲಿ ಮಹಾಮಾರಿ ಕೊರೊನಾ ವೈರಸ್ 2147 ಮಂದಿಗೆ ವಕ್ಕರಿಸಿದೆ. ಬೆಂಗಳೂರು ಒಂದರಲ್ಲೇ 22 ಮಂದಿ ಸೋಂಕಿತರು ಪ್ರಾಣ ಕಳೆದುಕೊಂಡಿದೆ .ಸಂಖ್ಯೆ ನಗರದಲ್ಲಿ ಇಂದು 1131 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.ನಗರದಲ್ಲಿ ಸಕ್ರಿಯ ಪ್ರಕರಣದ 33308 ಮಂದಿಯಲ್ಲಿ  ಪತ್ತೆಯಾಗಿದೆ.

ಮಂಗಳೂರು:- ದ.ಕ ಜಿಲ್ಲೆಯಲ್ಲಿ ಇಂದು ಕೂಡ ಕೊರೊನಾ ರಣಕೇಕೆ ಹಾಕಿದೆ. ಇಂದು ಕೂಡ 166 ಮಂದಿಗೆ ಸೋಂಕು ತಗುಲಿದೆ. 7 ಮಂದಿಗೆ ಕೊರೊನಾಗೆ ಬಲಿಯಾಗಿದ್ದಾರೆ. 188 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 6881 ಆಗಿದ್ದು, ಇಲ್ಲಿಯವರೆಗೆ 3304 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.3369 ಮಂದಿ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ 246 ಮಂದಿಗೆ ಪತ್ತೆಯಾಗಿದೆ. ಒಟ್ಟು ಸೊಂಕಿತರ ಸಂಖ್ಯೆ 5605 ಆಗಿದ್ದು ,ಇಲ್ಲಿಯವರೆಗೆ 3161 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.2389 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

Related news

error: Content is protected !!