

ಅರೇಹಳ್ಳಿ: .ಕಾಫಿ ದೋಚಲು ಬಂದ ಕಳ್ಳರನ್ನು ತಡೆಯಲು ಕಾರಿನಿಂದ ಹೊರಗೆ ಇಳಿದು ಬರುತ್ತಿದ್ದ ವೇಳೆ ಕಾಫಿ ಬೆಳೆಗಾರ ಜಗನ್ನಾಥ್ ಶೆಟ್ಟಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಕಾಫಿಯನ್ನು ದೋಚಿ ಪರಾರಿಯಾದ ಘಟನೆ ಬೇಲೂರು ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಇದೀಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.


ಸುಮಾರು 4.30ರ ಸಮಯದಲ್ಲಿ ಮೂರ್ನಾಲ್ಕು ಜನರಿದ್ದ ಅದೇ ಕಳ್ಳರ ಗುಂಪೊಂದು ಕಾಫಿ ದೋಚಲು ಯತ್ನಿಸಿದ್ದು, ಆ ವೇಳೆಗಾಗಲೇ ಎಚ್ಚೆತ್ತ ಕಾಫಿ ಬೆಳೆಗಾರ ಜಗನ್ನಾಥ್ ಶೆಟ್ಟಿ ಕಾರಿನಿಂದ ಹೊರಗೆ ಇಳಿದು ಬರುತ್ತಿದ್ದ ವೇಳೆ ಅಲ್ಲಿದ್ದ ಗುಂಪು ಮಚ್ಚಿನಿಂದ ತಲೆಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ ಅಲ್ಲಿಂದ ಸುಮಾರು 100 ಕೆಜಿ ಗಳಷ್ಟು ಕಾಫಿಯನ್ನು ದೋಚಿ ಜೊತೆಗೆ ಪ್ರಾಣಿ ಹಾವಳಿಯಿಂದ ಕೃಷಿಯನ್ನು ರಕ್ಷಿಸಲು ಬಳಸುತ್ತಿದ್ದ ಬಂದೂಕನ್ನು ದೋಚಿ ಪರಾರಿಯಾಗಿದ್ದರು. ಹಲ್ಲೆಯಿಂದ ಗಂಭೀರ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿರುವ ಜಗನ್ನಾಥ್ ಶೆಟ್ಟಿ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಧ್ಯ ಅರೇಹಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.









