Sunday, July 26, 2026
spot_imgspot_img
spot_imgspot_img

5 ವರ್ಷದ ಬಾಲಕಿ ಮೇಲೆ ಅತ್ಯಾಚಾರ- ಬಳಿಕ ಗೋಣಿ ಚೀಲದಲ್ಲಿ ಹಾಕಿ ಬಿಸಾಕಿದ ಭೂಪ

- Advertisement -
- Advertisement -

ದುರ್ಗ್: ಐದು ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿ ಬಳಿಕ ಚೀಲದಲ್ಲಿ ತುಂಬಿಸಿ ಬಾವಿ ಬಳಿ ಎಸೆದು ಹೋಗಿರುವ ಘಟನೆ ಛತ್ತೀಸಗಢದ ದುರ್ಗ್ ಜಿಲ್ಲೆಯಲ್ಲಿ ನಡೆದಿದೆ.

ಶುಕ್ರವಾರ ಮಧ್ಯಾಹ್ನದ ಬಳಿಕ ಘಟನೆ ಸಂಭವಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಬಾಲಕಿಯು ಶಾಲೆಯಿಂದ ಮನೆಗೆ ಮರಳುವಾಗ ಚಾಕೊಲೇಟ್ ಖರೀದಿಸಲು ಅಂಗಡಿಯೊಂದಕ್ಕೆ ಹೋಗಿದ್ದರು. ಅಂಗಡಿಯಲ್ಲಿದ್ದ ಆರೋಪಿ ಧನೇಶ್ವರ್ ಸಾಹು(35) ಚಾಕೊಲೇಟ್ ಕೊಡುವ ನೆಪದಲ್ಲಿ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದಿದ್ದ.

‘ಬಾಲಕಿ ತನ್ನ ಮನೆಗೆ ಬರದಿರುವ ಕಾರಣ ಆತಂಕಗೊಂಡ ಪೋಷಕರು ಎರಡು ಗಂಟೆ ಶೋಧ ನಡೆಸಿದ್ದಾರೆ. ಬಳಿಕ ಬಾವಿಯೊಂದರ ಬಳಿ ಗೋಣಿಚೀಲ ಪತ್ತೆಯಾಗಿದ್ದು, ಅದರೊಳಗೆ ಬಾಲಕಿಯಿದ್ದರು’ ಎಂದು ಪೊಲೀಸರು ಹೇಳಿದ್ದಾರೆ.

ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಅವರ ಆರೋಗ್ಯ ಸ್ಥಿರವಾಗಿದೆ’ ಎಂದು ತಿಳಿಸಿದ್ದಾರೆ

- Advertisement -

Related news

error: Content is protected !!