- Advertisement -
- Advertisement -
ದಾವಣಗೆರೆ: ಕ್ಷುಲ್ಲಕ ಕಾರಣಕ್ಕೆ ಸಹೋದರರಿಬ್ಬರು ಜಗಳವಾಡಿ ಕೊನೆಗೆ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ತಾಲ್ಲೂಕಿನ ಕಕ್ಕರಗೊಳ್ಳದ ಆಂಜನೇಯ ಬಡಾವಣೆಯಲ್ಲಿ ನಡೆದಿದೆ.

ಮೃತಪಟ್ಟವರನ್ನು ಪೀರ್‌ಸಾಬ್ ಎಂದು ಗುರುತಿಸಲಾಗಿದೆ.

ಮದ್ಯ ಕುಡಿದ ಅಮಲಿನಲ್ಲಿ ಇಬ್ಬರು ಜಗಳವಾಡಿದ್ದು, ಈ ವೇಳೆ ತಮ್ಮ ಮೆಹಬೂಬ್ ಸಾಬ್ ಅಣ್ಣ ಪೀರ್‌ಸಾಬ್ ಅವರನ್ನು ದೂಡಿದ್ದಾನೆ. ಆಯತಪ್ಪಿ ಕೆಳಗೆ ಬಿದ್ದ ಪೀರ್‌ಸಾಬ್ ಅವರ ತಲೆಗೆ ಪೆಟ್ಟು ಬಿದ್ದಿದ್ದು, ತೀವ್ರವಾಗಿ ಗಾಯಗೊಂಡರು. ಆಸ್ಪತ್ರೆಗೆ ದಾಖಲಿಸಿ ಮನೆಗೆ ಕರೆತಂದ ವೇಳೆ ಮೃತಪಟ್ಟಿದ್ದಾರೆ. ಈ ಘಟನೆ ಸಂಬಂಧಿಸಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



- Advertisement -








