Saturday, June 6, 2026
spot_imgspot_img
spot_imgspot_img

ಧರ್ಮಸ್ಥಳ: ಆನೆ ಮಾವುತ ಮತ್ತು ತಂಗಿಯ ಕೊಲೆ ಪ್ರಕರಣ; ಮರುತನಿಖೆಗೆ ಆಗ್ರಹಿಸಿ ಎಸ್ಐಟಿ ಕಚೇರಿಗೆ ದೂರು

- Advertisement -
- Advertisement -

ಬೆಳ್ತಂಗಡಿ: 2012ರಲ್ಲಿ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಬೂರ್ಜಿ ಎಂಬಲ್ಲಿ ನಡೆದಿದ್ದ ಆನೆ ಮಾವುತ ನಾರಾಯಣ ಮತ್ತು ಅವರ ಸಹೋದರಿ ಯಮುನಾ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರು ತನಿಖೆಗೆ ಆಗ್ರಹಿಸಿ ಅವರ ಮಕ್ಕಳಾದ ಗಣೇಶ್ ಮತ್ತು ಭಾರತಿ ಬೆಳ್ತಂಗಡಿಯ ಎಸ್.ಐ.ಟಿ ಕಚೇರಿಗೆ ಆ.18ರಂದು ದೂರು ನೀಡಿದ್ದಾರೆ. ಅಧಿಕಾರಿಗಳು ಸ್ಥಳೀಯ ಠಾಣೆಗೆ ದೂರು ನೀಡಲು ತಿಳಿಸಿದ್ದಾರೆ.

ಮೃತ ನಾರಾಯಣ ಅವರ ಪುತ್ರ ಗಣೇಶ್ ಮತ್ತು ಪುತ್ರಿ ಭಾರತಿ, ತಮ್ಮ ತಂದೆ ಮತ್ತು ಅತ್ತೆಯ ಸಾವಿನ ಹಿಂದಿನ ರಹಸ್ಯ ಬಯಲಾಗಬೇಕು, ನಿಜವಾದ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಎಸ್‌ಐಟಿ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

- Advertisement -

Related news

error: Content is protected !!