



ಶಿವಮೊಗ್ಗ: 44ನೇ ರಾಜ್ಯ ಸಮ್ಮೇಳನವು ಶಿವಮೊಗ್ಗದಲ್ಲಿ ನಡೆಯಲಿದ್ದು, ಈ ರಾಜ್ಯ ಸಮ್ಮೇಳನದ 2024-25 ನೇ ಸಾಲಿನ ನೂತನ ರಾಜ್ಯ ಅಧ್ಯಕ್ಷರಾಗಿ ಡಾ. ರವಿ ಎಂ.ಎನ್ ಹಾಗೂ ನೂತನ ರಾಜ್ಯ ಕಾರ್ಯದರ್ಶಿಯಾಗಿ ಪ್ರವೀಣ್ ಹೆಚ್.ಕೆ ಅವರು ಆಯ್ಕೆಯಾಗಿರುತ್ತಾರೆ.
ಡಾ. ರವಿ ಎಂ.ಎನ್ ಇವರು ಮೂಲತಃ ಮಂಡ್ಯದವರು, M.Com., M.B.A., M.Phil., Ph.D ಪದವಿದವರಾಗಿದ್ದಾರೆ. ಇವರು ಅಲ್ಪಾವಧಿ ವಿಸ್ತಾರಕರಾಗಿ, ಉಜಿರೆ ನಗರ ಅಧ್ಯಕ್ಷರಾಗಿ, ಜಿಲ್ಲಾ ಪ್ರಮುಖರಾಗಿ, ಕಾರ್ಯಕಾರಿಣಿ ಸದಸ್ಯರಾಗಿ, ರಾಜ್ಯ ಕಾರ್ಯ ಸಮಿತಿ ಸದಸ್ಯರಾಗಿ, ರಾಜ್ಯ ಉಪಾಧ್ಯಕ್ಷರಾಗಿ ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಇವರ ಕೇಂದ್ರ ಮಂಗಳೂರು.
ನೂತನ ರಾಜ್ಯ ಕಾರ್ಯದರ್ಶಿಯಾಗಿ ಪ್ರವೀಣ್ ಹೆಚ್.ಕೆ ಅವರು ಆಯ್ಕೆಯಾಗಿದ್ದು ಇವರು ಮೂಲತಃ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರು, ಮೈಸೂರಿನ ಜೆ ಎಸ್ ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ರಾಸಾಯನಿಕ ಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು ಪ್ರಸ್ತುತ ಶಿವಮೊಗ್ಗದ ಸಿಬಿಆರ್ ನ್ಯಾಷನಲ್ ಕಾಲೇಜ್ ಆಫ್ ಲಾ ನಲ್ಲಿ ಅಂತಿಮ ವರ್ಷದ ಎಲ್‌ಎಲ್‌ಬಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಇವರ ಕೇಂದ್ರ ಶಿವಮೊಗ್ಗ. 2024-25ನೇ ಸಾಲಿನ ನೂತನ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳಾಗಿ ಆಯ್ಕೆಯಾದ ಇಬ್ಬರಿಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕದ ವತಿಯಿಂದ ಅಭಿನಂದನೆಗಳು.








