Saturday, April 20, 2024
spot_imgspot_img
spot_imgspot_img

ಮಂಗಳೂರಿನಲ್ಲಿ ಹೆಚ್ಚಿದ ಡ್ರಗ್ಸ್ ಹಾವಳಿ: ಬಿಗಿ ಕಾರ್ಯಾಚರಣೆ

- Advertisement -G L Acharya panikkar
- Advertisement -

ಮಂಗಳೂರು: ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾದಕವಸ್ತುಗಳ ವ್ಯವಹಾರ ನಡೆಯುತ್ತಿರುವ ಬಗ್ಗೆ ಪೊಲೀಸರ ಮಾಹಿತಿಯ ಹಿನ್ನಲೆ ಕಾಲೇಜು ಆಡಳಿತ ಮಂಡಳಿಗಳು ಈಗಾಗಲೇ ಡ್ರಗ್ಸ್ ತಡೆ ಸಮಿತಿ ಮತ್ತು ಆಯಂಟಿ ಡ್ರಗ್ಸ್ ಸ್ಕ್ವಾಡ್‌ಗಳನ್ನು ಇನ್ನಷ್ಟು ವಿಶೇಷ ಕಾರ್ಯಾಚರಣೆ ಮುಂದಾಗಿವೆ.

ಲಾಕ್‌ಡೌನ್ ಅವಧಿಯಲ್ಲಿ ಕಾಲೇಜು ಕ್ಯಾಂಪಸ್, ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳು ಇಲ್ಲದಿದ್ದರೂ ಕೆಲವು ವಿದ್ಯಾರ್ಥಿಗಳ ಕೈಗೆ ಡ್ರಗ್ಸ್ ತಲುಪಿಸುವಲ್ಲಿ ಡ್ರಗ್ಸ್ ಪೆಡ್ಲರ್‌ಗಳು ಯಶಸ್ವಿಯಾಗಿದ್ದಾರೆ. ಹಲವು ಪ್ರಕರಣಗಳಲ್ಲಿ ಪೊಲೀಸರ ಸಕಾಲಿಕ ಕಾರ್ಯಾಚರಣೆಯಿಂದಾಗಿ ಜಾಲದ ಕೆಲವು ಕೊಂಡಿಗಳು ಕಡಿದುಕೊಂಡಿವೆ. ಮುಂದೆ ಕಾಲೇಜುಗಳು, ಹಾಸ್ಟೆಲ್‌ಗಳು ತೆರೆದುಕೊಂಡಾಗ ಡ್ರಗ್ಸ್ ಚಟುವಟಿಕೆ ಹೆಚ್ಚಾಗಬಹುದು ಎಂಬ ಹಿನ್ನೆಲೆಯಲ್ಲಿ ಹೆಚ್ಚಿನ ನಿಗಾ ಇಡಲು ಯೋಜಿಸಲಾಗಿದೆ.

Educational and Creative composition with the message Stop Drugs on the blackboard

ಡ್ರಗ್ಸ್ ಮಾರಾಟ ಪ್ರಕರಣಗಳಿಗೆ ಸಂಬ0ಧಿಸಿ ಮಂಗಳೂರು ಪೊಲೀಸರು ಈಗಾಗಲೇ ಬೆಂಗಳೂರಿನಿ0ದ ವಿದೇಶಿ ಪ್ರಜೆಗಳನ್ನು ಕೂಡ ವಶಕ್ಕೆ ಪಡೆದಿದ್ದಾರೆ. ಮವಿದ್ಯಾಭ್ಯಾಸಕ್ಕೆಂದು ಬಂದಿರುವ ಕೆಲವರು ಅಕ್ರಮವಾಗಿ ನೆಲೆಸಿದ್ದಾರೆ. ಡ್ರಗ್ಸ್ ಪೆಡ್ಲರ್‌ಗಳು ಬೆಂಗಳೂರಿನಲ್ಲಿದ್ದುಕೊ0ಡೇ ಮಂಗಳೂರು, ಕಾಸರಗೋಡು ಭಾಗದ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾಧಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಲೇಜುಗಳಲ್ಲಿ ಆಯಂಟಿ ಡ್ರಗ್ಸ್ ಕಮಿಟಿ, ಆಯಂಟಿ ಡ್ರಗ್ಸ್ ಸ್ಕ್ವಾಡ್, ಆಯಂಟಿ ರ್ಯಾಗಿಂಗ್ ಕಮಿಟಿ ಗಳನ್ನು ರಚಿಸಬೇಕು. ಇದರಲ್ಲಿ ಪ್ರಾಂಶು ಪಾಲರು, ಆಪ್ತ ಸಮಾಲೋಚಕರು, ವಿದ್ಯಾರ್ಥಿ ಕ್ಷೇಮ ಪಾಲನ ಅಧಿಕಾರಿಗಳು, ಉಪನ್ಯಾಸಕರು ಮತ್ತು ಪೊಲೀಸರು ಇರಬೇಕು. ಈಗಾಗಲೇ ಕಮಿಟಿ ಇರುವ ಕಡೆಗಳಲ್ಲಿ ಹೆಚ್ಚು ಕ್ರಿಯಾಶೀಲವಾಗುವಂತೆ ನೋಡಿಕೊಳ್ಳಬೇಕು. ಹೆತ್ತವರು ಕೂಡ ಮಕ್ಕಳ ಚಟುವಟಿಕೆ, ವರ್ತನೆ ಬಗ್ಗೆ ಗಮನ ಹರಿಸುತ್ತಿರಬೇಕು ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.

ವೈದ್ಯಕೀಯ ಕಾಲೇಜುಗಳು ನಮ್ಮ ವಿ.ವಿ.ಯ ನಿಯಂತ್ರಣದಲ್ಲಿಲ್ಲ. ಇತರ 207 ಕಾಲೇಜುಗಳಿಗೂ ಆಯಂಟಿ ಡ್ರಗ್ಸ್ ಕಮಿಟಿ ರಚಿಸಲು ಯುಜಿಸಿ ಕೂಡ ಸೂಚಿಸಿದೆ. 38 ದೇಶಗಳ ವಿದ್ಯಾರ್ಥಿಗಳು ಕೂಡ ನಮ್ಮ ಕಾಲೇಜುಗಳಲ್ಲಿದ್ದು, ಅವರ ಮೇಲೆ ವಿಶೇಷ ನಿಗಾ ಇಡಲಾಗುವುದು. ಮಾದಕ ದ್ರವ್ಯ ಜಾಲಕ್ಕೆ ಬೀಳದಂತೆ ವಿದ್ಯಾರ್ಥಿಗಳು ಸ್ವಯಂ ಜಾಗೃತರಾಗಬೇಕು.

ಕಾಲೇಜು ವಿದ್ಯಾರ್ಥಿಗಳಿಗೆ ಸಿಂಥೆಟಿಕ್ ಡ್ರಗ್ಸ್, ಗಾಂಜಾಗಳನ್ನು ಪೂರೈಸುತ್ತಿದ್ದ ಜಾಲವನ್ನು ಪತ್ತೆಹಚ್ಚಿ ತನಿಖೆ ನಡೆಸಲಾಗುತ್ತಿದೆ. ಸಿಂಥೆಟಿಕ್ ಡ್ರಗ್ಸ್ ಭಾರೀ ಪ್ರಮಾಣದಲ್ಲಿ ದಾಸ್ತಾನು ಇರುವುದು ಗೊತ್ತಾಗಿದೆ. ವಿದ್ಯಾರ್ಥಿಗಳ ಕೈಗೆ ದೊರೆಯದಂತೆ ಮಾಡುವುದರ ಜತೆಗೆ ಡ್ರಗ್ಸ್ ಹಾವಳಿಯನ್ನು ಸಂಪೂರ್ಣ ಮಟ್ಟ ಹಾಕುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

driving

- Advertisement -

Related news

error: Content is protected !!