Friday, April 26, 2024
spot_imgspot_img
spot_imgspot_img

ಸಫಾರಿ ವಾಹನದ ಮೇಲೆ ಒಂಟಿ ಸಲಗ ದಾಳಿ- ಕೂದಲೆಳೆಯಲ್ಲಿ ಪಾರಾದ ಪ್ರವಾಸಿಗರು!

- Advertisement -G L Acharya panikkar
- Advertisement -

ಚಾಮರಾಜನಗರ: ಸಫಾರಿಗೆಂದು ಪ್ರವಾಸಿಗರ ತಂಡವೊಂದು ಅರಣ್ಯಕ್ಕೆ ತೆರಳಿದಾಗ ಆನೆಯೊಂದು ಪ್ರವಾಸಿಗರ ಮೇಲೆ ದಾಳಿ ಮಾಡಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ.

ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟ (ಬಿಆರ್ ಹಿಲ್ಸ್) ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆನೆ ದಾಳಿಯ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಸುಸಂತಾ ನಂದಾರವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹುಲಿ ಸಂರಕ್ಷಿತ ಪ್ರದೇಶದ ಕೆ‌.ಗುಡಿ ಸಫಾರಿಯಲ್ಲಿ ಭತ್ತದಗದ್ದೆ ಕೆರೆ ಎಂಬ ರಸ್ತೆಯಲ್ಲಿ ಸಫಾರಿ ಜೀಪ್ ಕಂಡ ಆನೆಯೊಂದು ದಾಳಿ ಮಾಡಲು ಅಟ್ಟಾಡಿಸಿಕೊಂಡು ಬಂದಿದೆ. ಈ ಸಂಧರ್ಭದಲ್ಲಿ, ಕಾರಿನ ಮುಂದೆ ಆನೆಯೊಂದು ಅಡ್ಡಹಾಕಿದೆ. ಜೀಪ್ ಚಾಲಕನ ಸಮಯೋಚಿತ ಪ್ರಜ್ಞೆಯಿಂದ ದೊಡ್ಡ ಗಂಡಾಂತರ ತಪ್ಪಿದೆ.

ಸಾಮಾನ್ಯವಾಗಿ ಒಂದು ಆನೆ ಅಟ್ಟಾಡಿಸಿಕೊಂಡು ಬರುತ್ತದೆ. ಆದರೆ, ಎರಡು ಆನೆ ಸಫಾರಿ ವಾಹನ ಅಡ್ಡಗಟ್ಟಿದ ಘಟನೆ ತೀರಾ ಅಪರೂಪ ಎಂದು ಸಫಾರಿ ಜೀಪ್ ಚಾಲಕ ತಮ್ಮ ಅನುಭವ ಹೇಳಿಕೊಂಡರು.

- Advertisement -

Related news

error: Content is protected !!