Tuesday, July 21, 2026
spot_imgspot_img
spot_imgspot_img

ಎರುಂಬು: (ಆ.17) ಶ್ರೀ ದಿವ್ಯಜ್ಯೋತಿ ಮಿತ್ರ ವೃಂದ (ರಿ.) ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕೆಸರ್‌ಡೊಂಜಿ ದಿನ

- Advertisement -
- Advertisement -

ಎರುಂಬು: ಶ್ರೀ ದಿವ್ಯಜ್ಯೋತಿ ಮಿತ್ರ ವೃಂದ (ರಿ.) ಇದರ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕೆಸರ್‌ಡೊಂಜಿ ದಿನ ಕಾರ್ಯಕ್ರಮ ಆ.17-8-2025ನೇ ಆದಿತ್ಯವಾರ ಎರುಂಬು ಮೂಡಾಯಿಬೆಟ್ಟು ಕೆಸರುಗದ್ದೆಯಲ್ಲಿ ನಡೆಯಲಿದೆ.

ಬೆಳಿಗ್ಗೆ 6.00 ರಿಂದ ಶ್ರೀ ವಿಷ್ಣುಮಂಗಲ ದೇವಸ್ಥಾನದಲ್ಲಿ ಭಜನೆ ಬಳಿಕ ಪವಮಾನ ಅಭಿಷೇಕ ಮತ್ತು ಶ್ರೀ ದೇವರಿಗೆ ವಿಶೇಷ ಪೂಜೆ ನಡೆಯಲಿದೆ. 8.30ರಿಂದ ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಮೆರವಣಿಗೆ ಹೊರಡುವುದು.

ಬಳಿಕ 9:15ಕ್ಕೆ ಕೆಸರು ಗದ್ದೆಯಲ್ಲಿ ಆಟೋಟ ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ವೈದ್ಯ ಅಭಯ ಆಯುರ್‌ ಸೆಂಟರ್‌ ಕಲ್ಲಡ್ಕ ಡಾ.ರವಿಕಿರಣ ಪಡಿಬಾಗಿಲು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ವಿಟ್ಲ ಉದ್ಯಮಿ ಸತೀಶ್ ಆಳ್ವ ಇರಾ ಬಾಳಿಕೆ ಅಧ್ಯಕ್ಷತೆ ವಹಿಸಲಿದ್ದಾರೆ.

ಉದ್ಯವಿಗಳು ಮತ್ತು ಕೃಷಿಕ ಕಲಾಬಂಧು ಗುಬ್ಯ ಶ್ರೀಧರ ಕೆ. ಶೆಟ್ಟಿ ಮೇಗಿನಗುತ್ತು, ಭಾರತ್ ಶಾಮಿಯಾನ ಮತ್ತು ಸಮೂಹ ಸಂಸ್ಥೆಗಳು, ವಿಟ್ಲ ಮಾಲಕ ಸಂಜೀವ ಪೂಜಾರಿ, ಅಳಿಕೆ ನಿವೃತ್ತ ಶಿಕ್ಷಕ ಯಶೋಧರ ಬಂಗೇರ, ಬೊಳ್ನಾಡು ಟೆಕ್ನೋ ಸರ್ವೀಸಸ್ ಮಾಲಕ ಶರತ್ ಚಂದ್ರ ಮಡಿಯಾಲ, ಅಳಿಕೆ ಬಂಟರ ಸಂಘ ಮಹಿಳಾ ವಿಭಾಗ ಅಧ್ಯಕ್ಷೆ ಸಾಯಿಗೀತಾ ಹೆಗ್ಡೆ, ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಕೃಷ್ಣಯ್ಯ ಕೆ. ವಿಟ್ಲ ಅರಮನೆ, ಎರುಂಬು ಶ್ರೀ ವಿಷ್ಣುಮಂಗಲ ದೇವಸ್ಥಾನ ಎರುಂಬು ಅರ್ಚಕರು ಬಾಲಕೃಷ್ಣ ಕಾರಂತ, ರಾಜಲಕ್ಷ್ಮಿ ರೋಡ್ ಬೈನ್ಸ್ ತಾಲಿಪಡ್ಪು ರಾಜಶೇಖರ ಶೆಟ್ಟಿ, ಅಳಿಕೆ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಅಧ್ಯಕ್ಷ ರೂಪೇಶ್ ರೈ, ಕ್ರೀಡಾ ಪೋಷಕ ರಾಜೇಶ್ ಉಕ್ಕುಡ, ಸಾಮಾಜಿಕ ಕಾರ್ಯಕರ್ತರು ಮತ್ತು ಶೈಕ್ಷಣಿಕ ಪೋಷಕ ಪ್ರಕಾಶ್ ರೈ ಕಲ್ಲಂಗಳ, ರಮೇಶ್ ಬಂಗೇರ KSRTC ವಿಟ್ಲ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.

ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಅಳಿಕೆ ಶ್ರೀ ಸತ್ಯಸಾಯ ಲೋಕ ಸೇವಾ ವಿದ್ಯಾಸಂಸ್ಥೆ ಕಾರ್ಯದರ್ಶಿ ಚಂದ್ರಶೇಖರ ಭಟ್, ಉದ್ಯಮಿ, ದುರ್ಗಾಂಬಾ ಸಮೂಹ ಸಂಸ್ಥೆ ಉಕ್ಕುಡ ವಿಟ್ಲ ಮಾಲಕ ರಮೇಶ್ ವರಪ್ಪಾದೆ, ಅಳಿಕೆ ನಿವೃತ್ತ ಶಿಕ್ಷಕ ಮತ್ತು ಸಾಮಾಜಿಕ ಕಾರ್ಯಯರ್ತ ಕಾನ ಈಶ್ವರ ಭಟ್, ರಂಜಿತ್ ಶೆಟ್ಟಿ ಗುಬ್ಯ ಉದ್ಯಮಿ ಕನ್ಯಾನ, ಕೋಸ್ಟರ್‌ ಸಿನಿ ಯುನಿಟ್‌ ಲಕ್ಷ್ಮೀಶ್ ಕಡಮಣ್ಣಾಯ ಬೇಂಗ್ರೋಡಿ, ವಿಟ್ಲ ಘಟಕ ಬಂಟರ ಸಂಘ ಅಧ್ಯಕ್ಷ ರಾಜೀವ ಭಂಡಾರಿ, ಪ್ರದೀಪ್ ಬಲ್ಲಾಳ್ ಎರುಂಬು, ಮಂಗಳೂರು ಕರ್ನಾಟಕ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಜಗದೀಶ್ ಬಲ್ಲಾಳ್, ಉದ್ಯಮಿ ಆನಂದ ಶೆಟ್ಟಿ ತಾಳಿಪಡ್ಪು, ಉದ್ಯಮಿ ದೇವದಾಸ ಅಡ್ಯನಡ್ಕ, LIC ಪ್ರತಿನಿಧಿ ಜಗಜ್ಜೀವನ್ ರಾಮ್ ಶೆಟ್ಟಿ ಮೈರ, ಕೇಪು ಘಟಕ ಬಂಟರ ಸಂಘ ಅಧ್ಯಕ್ಷ ತಾರಾನಾಥ್ ಶೆಟ್ಟಿ ಕುಕ್ಕೆಬೆಟ್ಟು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.

ಆಟೋಟ ಸ್ಪರ್ಧೆಗಳು

ಅಂಗನವಾಡಿ ಮಕ್ಕಳಿಗೆ
*50ಮೀ ಓಟ
*ಕಪ್ಪೆ ಜಿಗಿತ
*ದೂರ ಜಿಗಿತ
*ಶ್ಲೋಕ ಕಂಠಪಾಠ
*ವೇಗದ ನಡಿಗೆ
*ಕಡ್ಲೆ ಹೆಕ್ಕುವುದು

ಬಾಲಕರಿಗೆ (1ರಿಂದ 7ನೇ ತರಗತಿ ಮತ್ತು 8ರಿಂದ 10ನೇ ತರಗತಿ)
*ಹಾಳೆಯಲ್ಲಿ ಕುಳಿತು ಎಳೆಯುವುದು
*ಮಡಿಕೆ ಹೊಡೆಯುವುದು
*ತೆಂಗಿನಕಾಯಿ ದೂರ ಎಸೆತ
*ಗೂಟದಾಟ
*ಹಗ್ಗಜಗ್ಗಾಟ

ಬಾಲಕಿಯರಿಗೆ (1ರಿಂದ 7ನೇ ತರಗತಿ ಮತ್ತು 8ರಿಂದ 10ನೇ ತರಗತಿ)
*ಭಕ್ತಿಗೀತೆ ಸ್ಪರ್ಧೆ
*ಮಡಿಕೆ ಹೊಡೆಯುವುದು
*ಗೂಟದಾಟ
*ಹಾಳೆಯಲ್ಲಿ ಕುಳಿತು ಎಳೆಯುವುದು

ಪುರುಷರಿಗೆ
*ಹಗ್ಗಜಗ್ಗಾಟ
*ವಾಲಿಬಾಲ್
*ಅಡ್ಡ ಜಾರುಕಂಬ
*ಗೂಟದಾಟ
*ಮಡಿಕೆ ಹೊಡೆಯವುದು
*ತೆಂಗಿನಕಾಯಿ ಎಸೆಯುವ ಸ್ಪರ್ಧೆ

ಮಹಿಳೆಯರಿಗೆ
*ಹಗ್ಗಜಗ್ಗಾಟ
*ಗೂಟದಾಟ
*ತ್ರೋಬಾಲ್
*ಮಡಿಕೆ ಹೊಡೆಯುವುದು
*ತೆಂಗಿನಕಾಯಿ ಎಸೆಯುವ ಸ್ಪರ್ಧೆ

ಸಾರ್ವಜನಿಕರಿಗೆ ವಿಶೇಷ ಸ್ಪರ್ಧೆ
*ನಿಧಿ ಶೋಧನೆ ಮತ್ತು ದಂಪತಿಗಳಿಗೆ ಹಾಳೆಯಲ್ಲಿ ಕುಳಿತು ಎಳೆಯುವ ಸ್ಪರ್ಧೆ
*ಆಸಕ್ತ ಸಾರ್ವಜನಿಕರಿಗೆ ಅಡ್ಡ ಜಾರುಕಂಬ ಸ್ಪರ್ಧೆ

ವಿಶೇಷ ಸೂಚನೆ:
*ಎಲ್ಲಾ ಸ್ಪರ್ಧೆಗಳು ಕೆಸರು ಗದ್ದೆಯಲ್ಲಿಯೇ ನಡೆಯುವುದರಿಂದ ಬೇಕಾದ ಸಿದ್ಧತೆಗಳೊಂದಿಗೆ ಸ್ಪರ್ಧಾಳುಗಳು ಬರುವುದು.
*ಬೆಳಿಗ್ಗೆ ಗಂಟೆ 9-30ಕ್ಕೆ ಸರಿಯಾಗಿ ವಾಲಿಬಾಲ್ ಪಂದ್ಯಾಟ ಆರಂಭವಾಗುತ್ತದೆ.
*ತಂಡ ಸ್ಥಳದಲ್ಲಿ ರಚಿಸಲಾಗುವುದು.
*ಸ್ಪರ್ಧೆಗಳಲ್ಲಿ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
*ಹಾಳೆಗಳನ್ನು ಸಾಧ್ಯವಾದಷ್ಟು ಸ್ಪರ್ಧಾಳುಗಳೇ ತರತಕ್ಕದ್ದು.
*ಮೆರವಣಿಗೆಯಲ್ಲಿ ಭಾಗವಹಿಸಿದ ಕೃಷ್ಣವೇಷಧಾರಿಗಳಿಗೆ (3ವರ್ಷದಿಂದ 70 ವರ್ಷದವರೆಗಿನವರಿಗೂ ಭಾಗವಹಿಸಲು ಅವಕಾಶವಿದೆ) ವಿಶೇಷ ಬಹುಮಾನವಿರುವುದು.
*ಭಾಗವಹಿಸುವ ಸ್ಪರ್ಧಾಳುಗಳು ಸಮಯಕ್ಕೆ ಸರಿಯಾಗಿ ಬಣ್ಣ ಮತ್ತು ವೇಷಭೂಷಣಗಳೊಂದಿಗೆ ಭಾಗವಹಿಸತಕ್ಕದ್ದು
*ಯಾವುದೇ ಸ್ಪರ್ಧೆಗಳಿಗೆ ಪ್ರವೇಶ ಶುಲ್ಕ ಇರುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
7892830449, 7019001459, 6362672494

- Advertisement -

Related news

error: Content is protected !!