Thursday, June 25, 2026
spot_imgspot_img
spot_imgspot_img

ಮಾತುಕತೆ ‌ಮೂಲಕ ರೈತರ ಗೊಂದಲ ಪರಿಹರಿಸಲು ಯತ್ನ: ಪ್ರಧಾನಿ ಮೋದಿ

- Advertisement -
- Advertisement -

ನವದೆಹಲಿ: ರೈತರ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರ್ಕಾರ ನಿರಂತರವಾಗಿ ಪ್ರಯತ್ನ ಮಾಡುತ್ತಿದೆ. ಮಾತುಕತೆ ‌ಮೂಲಕ ರೈತರ ಗೊಂದಲ ಪರಿಹರಿಸಲು ಯತ್ನವಾಗುತ್ತಿದೆ ಎಂದು ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಯವರು ಹೇಳಿಕೆ ನೀಡಿದರು.

ಧರಣಿ ನಿರತ ರೈತರು ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲಿ. ನಾವು ದೇಶದ ಬಗ್ಗೆ ಆಲೋಚನೆ ಮಾಡಬೇಕು ಎಂದು ರೈತ ಕಾಯ್ದೆಗಳ ಬಗ್ಗೆ ಹಾಗೂ ಪ್ರಸ್ತುತ ನಡೆಯುತ್ತಿರುವ ರೈತ ಚಳುವಳಿಯ ಬಗ್ಗೆ ಪ್ರಧಾನಿ ಮೋದಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸರ್ವಪಕ್ಷ ಸಭೆಯ ವೇಳೆ, ಧರಣಿ ನಿರತ ರೈತರಿಗೆ ಕೇಂದ್ರ ಸರ್ಕಾರ ನೀಡಿರುವಂತಹ ಆಫರ್ ಈಗಲೂ ಚಾಲ್ತಿಯಲ್ಲಿದೆ. ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವಾಗುತ್ತಿದೆ. ಆದರೆ, ನಾವು ಇನ್ನೂ ಸಹಮತಕ್ಕೆ ಬಂದಿಲ್ಲ ಎಂದು ಮೋದಿ ತಿಳಿಸಿದರು.

- Advertisement -

Related news

error: Content is protected !!