Sunday, June 21, 2026
spot_imgspot_img
spot_imgspot_img

ಮೊಬೈಲ್ ಬ್ಯಾಟರಿ ಸ್ಪೋಟಗೊಂಡು ಗಂಭೀರ ಗಾಯಗೊಂಡ ಬಾಲಕ!

- Advertisement -
- Advertisement -

ಹಾವೇರಿ: ಕೆಟ್ಟುಹೋಗಿದ್ದ ಮೊಬೈಲ್ ನ ಹಳೆ ಬ್ಯಾಟರಿ ಸ್ಫೋಟಗೊಂಡ ಪರಿಣಾಮ ಬಾಲಕನ ಕೈ ಬೆರಳುಗಳು ತುಂಡಾಗಿದ್ದು, ಮುಖಕ್ಕೂ ಗಾಯವಾಗಿರುವ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ನಡೆದಿದೆ.

ಗಂಭೀರ ಗಾಯಗೊಂಡ ಬಾಲಕನನ್ನು ಕಾರ್ತಿಕ್(10) ಎಂದು ಗುರುತಿಸಲಾಗಿದೆ. ಮನೆ ಪಕ್ಕದಲ್ಲೇ ಹಾಳಾಗಿದ್ದ ಮೊಬೈಲ್ ಬ್ಯಾಟರಿಯನ್ನು ಎತ್ತಿಕೊಂಡು ಆಟವಾಡಲು ತೊಡಗಿದ್ದಾನೆ. ಬ್ಯಾಟರಿ ಏಕಾಏಕಿ ಸ್ಫೋಟಗೊಂಡಿದ್ದು, ಬಾಲಕನ ಮೂರು ಬೆರಳುಗಳು ತುಂಡಾಗಿವೆ. ಮುಖಕ್ಕೂ ಗಂಭೀರವಾಗಿ ಗಾಯಗಳಾಗಿವೆ. ಬಾಲಕನನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!