Sunday, October 6, 2024
spot_imgspot_img
spot_imgspot_img

ಬಂಟ್ವಾಳ: ವಿಕಲಾಂಗ ಬಡ ಮಹಿಳೆಯ ಮನೆಗೆ ವಿದ್ಯುತ್ ಕಲ್ಪಿಸುವ ಮೂಲಕ ನೆರವು.

- Advertisement -
- Advertisement -

ಬಂಟ್ವಾಳ:- ವಿಕಲಾಂಗ ಬಡ ಮಹಿಳೆ ಮನೆಯೊಂದಕ್ಕೆ ವಿದ್ಯುತ್ ವ್ಯವಸ್ಥೆ ಕಲ್ಪಿಸುವ ಮೂಲಕ  ಮಾನವೀಯತೆ ಮೆರೆದ ಮಣಿನಾಲ್ಕೂರು ಗ್ರಾಮದ ಬಿಜೆಪಿ ಮುಖಂಡರು ಹಾಗೂ ಮೆಸ್ಕಾಂ ಅಧಿಕಾರಿಗಳು.

ಮಣಿನಾಲ್ಕೂರು ಗ್ರಾಮದ ಕೈಯಾಳ ಎಂಬಲ್ಲಿ ಮೋಹಿನಿ ಗೋಪಾಲ ಪೂಜಾರಿ ಎಂಬವರು ವಿಕಲಾಂಗೆಯಾಗಿದ್ದು  , ಬಡಕುಟುಂಬವಾದ ಇವರು ವಿದ್ಯುತ್ ಸಂಪರ್ಕವಿಲ್ಲದೆ ಜೀವನ ಸಾಗಿಸುತಿದ್ದರು .ಮನೆಯ ಮಾಲಕಿ ವಿಕಲಾಂಗೆ ಮೋಹಿನಿ ಗೋಪಾಲ ಪೂಜಾರಿ ಇವರು ಸ್ಥಳೀಯ ಬಿ.ಜೆ.ಪಿ ಯ ಪ್ರಮುಖರಾದ ಸಾಂತಪ್ಪ ಪೂಜಾರಿ ಹಟದಡ್ಕ ಇವರಲ್ಲಿ  ಕೇಳಿಕೊಂಡಾಗ ವಿದ್ಯುತ್ ಗುತ್ತಿಗೆದಾರಾದ ಹಾಗೂ 95 ಬೂತ್ ಸಮಿತಿಯ ಅಧ್ಯಕ್ಷರಾದ ದೇವಾದಾಸ್ ನಾಯಕ್ ಹಾಗೂ ಕಕ್ಯಪದವು ಮೆಸ್ಕಂ  ಶಾಖಾ ಅಧಿಕಾರಿ ನಿತಿನ್ ರವರು ವಿದ್ಯುತ್ ಸಂಪರ್ಕ ನೀಡುವಲ್ಲಿ  ಸಹಕಾರಿಸಿದ್ಧಾರೆ.

ಈ ಸಂದರ್ಭದಲ್ಲಿ ಭಜರಂಗದಳದ ಪ್ರಮುಖರಾದ ಸಂತೋಷ್ ಕುಲಾಲ್, ರವೀಂದ್ರ ಶೆಟ್ಟಿ ಕೈಯಾಳ,ಕ್ರಷ್ಣಪ್ಪ ಪೂಜಾರಿ, ರಾಜೇಶ್ ಕೈಯಾಳ ಪುರುಷೋತ್ತಮ ಕೈಯಾಳ, ಸುಧಾಕರ ಕೈಯಾಳ, ರೂಪೇಶ್ ಪೂಜಾರಿ ಕೊಡಂಗೆ, ದಿನೇಶ್ ಕೈಯಾಳ, ಜನರ್ದನ ಕೈಯಾಳ, ಸುನಿಲ್ ಪ್ರೀತಂ ಉಪಸ್ಥಿತರಿದ್ದರು.

- Advertisement -

Related news

error: Content is protected !!