Saturday, April 20, 2024
spot_imgspot_img
spot_imgspot_img

ಇಡ್ಕಿದು ಸೇವಾ ಸಹಕಾರಿ ಸಂಘದ ನೇತೃತ್ವದಲ್ಲಿ ಅಮೃತ ಸಿಂಚನ ರೈತ ಸೇವಾ ಒಕ್ಕೂಟ-ಮತ್ತು ಇಡ್ಕಿದು ಹಾಗೂ ಕುಳ ಗ್ರಾಮ ವಿಕಾಸ ಸಮಿತಿ ಸಹಯೋಗದೊಂದಿಗೆ ಗದ್ದೆ ನಾಟಿ

- Advertisement -G L Acharya panikkar
- Advertisement -

ಇಡ್ಕಿದು:ಇಡ್ಕಿದು ಸೇವಾ ಸಹಕಾರಿ ಸಂಘದ ನೇತೃತ್ವದಲ್ಲಿ ಅಮೃತ ಸಿಂಚನ ರೈತ ಸೇವಾ ಒಕ್ಕೂಟ ಮತ್ತು ಇಡ್ಕಿದು ಹಾಗೂ ಕುಳ ಗ್ರಾಮ ವಿಕಾಸ ಸಮಿತಿ ಸಹಯೋಗದೊಂದಿಗೆ ಕುಳ ಗ್ರಾಮದ ಕಾರ್ಯಾಡಿಯಲ್ಲಿ ಗದ್ದೆ ನಾಟಿ ಮಾಡಲಾಯಿತು. ಕಾರ್ಮಿಕರ ಕೊರತೆಯಿಂದ ಭತ್ತ ಕೃಷಿಯು ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ
ಸಹಕಾರಿ ಸಂಘವು ಗ್ರಾಮದಲ್ಲಿ ಹಡೀಲು ಬಿದ್ದ ಗದ್ದೆಗಳ ನಾಟಿಯೋಜನೆ ರೂಪಿಸಿದೆ. ಇದರ ಅಂಗವಾಗಿ ಕುಳ ಗ್ರಾಮ ಕಾರ್ಯಾಡಿ ಕಾಂತಪ್ಪ ಪೂಜಾರಿಯವರ ಒಂದು ಏಕ್ರೆ ಗದ್ದೆಯಲ್ಲಿ ಸಾಮೂಹಿಕ ನಾಟಿ ಕಾರ್ಯ ಮಾಡಲಾಯಿತು.

ನಿವೃತ್ತ ಯೋಧ ಶಿವಪ್ರಕಾಶ ಭತ್ತ ಕೃಷಿಯ ಬಗ್ಗೆ ಮಾಹಿತಿ ನೀಡಿ ನಾಟಿ ವಿಧಾನದ ಪ್ರಾತ್ಯಕ್ಷಿಕೆ ನೀಡಿದರು. ಇಡ್ಕಿದು ಸೇವಾ ಸಹಕಾರಿ ಸಂಘವು ಗ್ರಾಮ ಕೃಷಿ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡುತ್ತಿದ್ದು ಗದ್ದೆ ಕೊಯ್ಲು ಹಾಗೂ ಭತ್ತ ಬೇರ್ಪಡಿಸುವ ಯಂತ್ರಗಳನ್ನು ಬಾಡಿಗೆ ಆಧಾರದಲ್ಲಿ ನೀಡುತ್ತಿದೆ. ಜಲ ಮರುಪೂರಣ, ತರಕಾರಿ ಕೃಷಿಯ ಬಗ್ಗೆ ವಿಶೇಷ ಕಾರ್ಯಕ್ರಮಗಳ ಮೂಲಕ ಯುವ ಸಮೂಹವನ್ನು ಕೃಷಿಯೆಡೆಗೆ ಆಕರ್ಷಿಸುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿವೆ.

ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಶ್ರೀ ಸುಧಾಕರ ಶೆಟ್ಟಿ ಬೀಡಿನಮಜಲು ಮಾತನಾಡಿ ಮುಂದಿನ ದಿನಗಳಲ್ಲಿ ಇಡ್ಕಿದು ಹಾಗೂ ಕುಳ ಗ್ರಾಮದ ಎಲ್ಲಾ ಕೃಷಿ ಭೂಮಿಯಲ್ಲಿ ಸಾವಯವ ಕೃಷಿ ಮಾಡಿ ಆರೋಗ್ಯ ಹಾಗೂ ಆದಾಯ ವೃದ್ಧಿಸಿಕೊಂಡು ಸ್ವಾವಲಂಬಿ ಜೀವನ ನಡಸುವಂತೆ ನಾವೆಲ್ಲರೂ ಪ್ರಯತ್ನಿಸೂಣ ಎಂದರು.

ಉಪಾಧ್ಯಕ್ಷ ರಾಮ ಭಟ್ ನೀರಪಳಿಕೆ, ಕೊಂಕೋಡಿ ಪದ್ಮನಾಭ, ಸುರೇಶ್. ಕೆ. ಯಸ್, ರೈತ ಒಕ್ಕೂಟದ ಅಧ್ಯಕ್ಷ ಪ್ರಪುಲ್ಲ ಚಂದ್ರ ಕೋಲ್ಪೆ, ಪಂಚಾಯಿತ್ ಸದಸ್ಯ ಜಯರಾಮ ಕಾರ್ಯಾಡಿ, ಚಿದಾನಂದ ಪೆಲತ್ತಿಂಜ, ರಾ.ಸ್ವ.ಸ. ತಾಲೂಕು ಸೇವಾ ಪ್ರಮುಖ್ ರಮೇಶ್ ಆಳ್ವ, ಗ್ರಾಮ ವಿಕಾಸ ಸಮಿತಿ ಸದಸ್ಯರು,ಇಡ್ಕಿದು ಸೇವಾ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಈಶ್ವರ ನಾಯ್ಕ ಎಸ್, ನಿರ್ದೇಶಕರು ಮತ್ತು ನೌಕರ ವೃಂದದವರು ನಾಟಿ ಕಾರ್ಯದಲ್ಲಿ ಭಾಗವಹಿಸಿದ್ದರು. ಸಹಕಾರಿ ಸಂಘದ ಅಧ್ಯಕ್ಷರು ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.

- Advertisement -

Related news

error: Content is protected !!