- Advertisement -
- Advertisement -
ಗ್ರಾಮದ ರಜತಾದ್ರಿ ಮುಂಡ್ರಬೈಲು ಕಟ್ಟೆಯ ಬಳಿಗೆ KSRTC ಬಸ್ಸಿನ ವ್ಯವಸ್ಥೆ




ಇಡ್ಕಿದು ಗ್ರಾಮದ ರಜತಾದ್ರಿ ಮುಂಡ್ರಬೈಲು ಕಟ್ಟೆಯ ಬಳಿಗೆ KSRTC ಬಸ್ಸು ಬರಬೇಕೆಂದು ಸ್ಥಳೀಯ ವಿದ್ಯಾರ್ಥಿಗಳು ಶಾಸಕ ಅಶೋಕ್ ಕುಮಾರ್ ರೈಯವರಿಗೆ ಮನವಿ ಮಾಡಿದ್ದರು. ಮನವಿ ಮಾಡಿದ ಕೆಲವೇ ದಿನಗಳಲ್ಲಿ ಇದೀಗ ಇಂದು ಸೂರ್ಯವರೆಗೆ ಬರುತ್ತಿದ್ದ KSRTC ಬಸ್ಸು ಇದೀಗ ರಜತಾದ್ರಿ ಮುಂಡ್ರಬೈಲು ಕಟ್ಟೆಯವರೆಗೆ ಬಂದು ವಿದ್ಯಾರ್ಥಿಗಳ ಪ್ರಯಾಣಕ್ಕೆ ಅನುಕೂಲವಾಗಿದೆ.
ಇಂದು ರಜತಾದ್ರಿ ಕಟ್ಟೆಯ ಬಳಿ ಬಂದು ಬಸ್ ಗೆ ಪೂಜೆ ಮಾಡಿ ಸ್ವಾಗತಿಸಿ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಶಾಸಕರಿಗೆ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಧನ್ಯವಾದ ಸಮರ್ಪಿಸಿದ್ದಾರೆ.

ಬೆಳಿಗ್ಗೆ ಮತ್ತು ಸಂಜೆ ಎರಡು ಹೊತ್ತು ಬಸ್ಸಿನ ವ್ಯವಸ್ಥೆ ಇದ್ದು ಕೆಎಸ್‌ಆರ್‌ಟಿಸಿ ಬಸ್ಸ್‌ನ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಗ್ರಾಮಸ್ಥರು ಧನ್ಯವಾದ ತಿಳಿಸಿದ್ದಾರೆ.
- Advertisement -








