Sunday, July 26, 2026
spot_imgspot_img
spot_imgspot_img

ಕನ್ಯಾನ ಶಿವಶಕ್ತಿ ಬಾರ್ ಬಳಿ ಅಕ್ರಮ ಗೋ ಸಾಗಾಟದ ವಾಹನ ಜಪ್ತಿ..!

- Advertisement -
- Advertisement -

ಕನ್ಯಾನ: ಹೋರಿಯೊಂದನ್ನು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ವಧೆಮಾಡಿ ಮಾಂಸಕ್ಕಾಗಿ ಮಾರಾಟ ಮಾಡುವ ಉದ್ದೇಶದಿಂದ, ಕೇರಳ ಕಡೆಗೆ ಸಾಗಾಟ ಮಾಡುತ್ತಿದ್ದ ಘಟನೆ ಕನ್ಯಾನ ಶಿವಶಕ್ತಿ ಬಾರ್ ಬಳಿ ನಡೆದಿದೆ.

ಚಾಲಕ ಮೊಹಮ್ಮದ್ ಎಂಬಾತನು ಪುರುಷೋತ್ತಮ್ಮ ಹಾಗೂ ಯೋಗೀಶ್ ಎಂಬವರು ಸಾಗಾಟ ಮಾಡುತ್ತಿದ್ದರು.

ಕನ್ಯಾನ ಶಿವಶಕ್ತಿ ಬಾರ್ ಬಳಿ, ದೇಲಂತಬೆಟ್ಟು ಕಡೆಯಿಂದ ಸಂಶಯಾಸ್ಪದವಾಗಿ ಬಂದ ಪಿಕಪ್ ವಾಹನವನ್ನು, ರತ್ನಕುಮಾರ ಎಂ ಪೊಲೀಸ್‌ ಉಪ ನಿರೀಕ್ಷಕರು ವಿಟ್ಲ ಪೊಲೀಸ್ ಸಿಬ್ಬಂದಿಗಳೊಂದಿಗೆ ವಾಹನವನ್ನು ತಡೆದು ಪರಿಶೀಲಿಸಿದಾಗ, ವಾಹನದಲ್ಲಿ ಅದರ ಚಾಲಕ ಮೊಹಮ್ಮದ್ ಎಂಬಾತನು ಪುರುಷೋತ್ತಮ್ಮ ಹಾಗೂ ಯೋಗೀಶ್ ರವರುಗಳೊಂದಿಗೆ ಸೇರಿ, ಹೋರಿಯೊಂದನ್ನು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ವಧೆಮಾಡಿ ಮಾಂಸಕ್ಕಾಗಿ ಮಾರಾಟ ಮಾಡುವ ಉದ್ದೇಶದಿಂದ, ಕೇರಳ ಕಡೆಗೆ ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ.

ಮುಂದಿನ ಕಾನೂನುಕ್ರಮಕ್ಕಾಗಿ ಮೂವರು ಆರೋಪಿಗಳನ್ನು, ಕೃತ್ಯಕ್ಕೆ ಬಳಸಿದ ವಾಹನ ಮತ್ತು ಜಾನುವಾರುಗಳನ್ನು ವಶಕ್ಕೆ ಪಡೆದು, ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 113/2024, ಕಲಂ:5,6,7,12 THE KARNATAKA PREVENTION OF SLAUGHTER AND PRESERVATION OF CATTLE ACT-2020 ಮತ್ತು 66,192 ಐಎಂವಿ ಕಾಯ್ದೆ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!