Thursday, March 28, 2024
spot_imgspot_img
spot_imgspot_img

ವಾಟ್ಸ್​​ಆ್ಯಪ್​​ಗೆ ಪರ್ಯಾಯವಾಗಿ ಭಾರತ ಸರ್ಕಾರದಿಂದ 2 ಸ್ವಂತ ಆ್ಯಪ್

- Advertisement -G L Acharya panikkar
- Advertisement -

ನವದೆಹಲಿ: ವಾಟ್ಸ್​​ಆ್ಯಪ್ ಪ್ರೈವೆಸಿ ಪಾಲಿಸಿ ವಿವಾದದ ಬೆನ್ನಲ್ಲೇ ಹಲವಾರು ಗ್ರಾಹಕರು ಸಿಗ್ನಲ್​​ ಹಾಗೂ ಇನ್ನಿತರೆ ಮೆಸೇಜಿಂಗ್ ಆ್ಯಪ್​ಗಳ ಮೊರೆ ಹೋಗಿದ್ದಾರೆ. ಇದೀಗ ಭಾರತ ಸರ್ಕಾರ ವಾಟ್ಸ್​​ಆ್ಯಪ್​​ಗೆ ಪರ್ಯಾಯವಾಗಿ ತನ್ನದೇ ಎರಡು ಸ್ವಂತ ಆ್ಯಪ್​ಗಳನ್ನ​​ ಸಿದ್ಧಪಡಿಸಿದ್ದು, ಸದ್ಯ ಅವುಗಳ ಪರೀಕ್ಷೆ ನಡೆಸಲಾಗ್ತಿದೆ ಎಂದು ವರದಿಯಾಗಿದೆ.

ಎರಡು ಅಪ್ಲಿಕೇಶನ್‌ಗಳನ್ನು ಬೀಟಾ ಹಂತದಲ್ಲಿ ಪರೀಕ್ಷಿಸಲಾಗುತ್ತಿದೆ ಎಂಬುದನ್ನ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಮೂಲಗಳು ಖಚಿತಪಡಿಸಿವೆ ಎನ್ನಲಾಗಿದೆ. ಈ ಆ್ಯಪ್​ಗಳಿಗೆ ಸಂವಾದ್​ ಮತ್ತು ಸಂದೇಸ್​ ಎಂಬ ಕೋಡ್​ನೇಮ್​ಗಳನ್ನ ನೀಡಲಾಗಿದೆ.

ಗವರ್ನಮೆಂಟ್​ ಆಫ್ ಇಂಡಿಯಾ ನೌಕರರಿಗಾಗಿಯೇ GIMS ಆ್ಯಪ್ ಸಂದೇಸ್​ ಮತ್ತು ಸಂವಾದ್​ ಆ್ಯಪ್‌ಗಳನ್ನು ಸಂಪೂರ್ಣವಾಗಿ ಭಾರತ ಸರ್ಕಾರವೇ ಅಭಿವೃದ್ಧಿಪಡಿಸುತ್ತಿದೆ. ಇದು ವಾಟ್ಸ್​​ ಆ್ಯಪ್​​ ರೀತಿಯ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ಎಂದು ಸಚಿವಾಲಯದ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ಅಲ್ಲದೆ ಕೇಂದ್ರ ಸರ್ಕಾರದ ನೌಕರರಿಗೆ ಸಂವಹನ ಮಾಡಲು ಮಾತ್ರ, ಸರ್ಕಾರಿ ತ್ವರಿತ ಮೆಸೇಜಿಂಗ್ ಸೇವೆ(GIMS -Government Instant Messaging Service ) ಎಂಬ ಆ್ಯಪ್​​ಗಾಗಿ ಭಾರತ ಸರ್ಕಾರ ಪ್ಲಾನ್ ಮಾಡಿದೆಯಂತೆ.ಸರ್ಕಾರದೊಳಗೆ ಬಹಳ ಸಮಯದಿಂದ ನಮ್ಮದೇ ಆದ ಸ್ವಂತ, ಸ್ವತಂತ್ರ ಮತ್ತು ಸ್ವ-ಸ್ವಾಮ್ಯದ ತ್ವರಿತ ಮೆಸೇಜಿಂಗ್ ಸೇವೆಯನ್ನು ಹೊಂದುವ ಅಗತ್ಯತೆ ಇದೆ ಎಂಬುದು ಗಮನಕ್ಕೆ ಬಂದಿತ್ತು.

ವಾಟ್ಸ್ಯಾಪ್​​ ವಿವಾದ ಶುರುವಾಗುವ ಮುಂಚೆಯೇ ಈ ಅಪ್ಲಿಕೇಶನ್‌ಗಳ ಅಭಿವೃದ್ಧಿ ಪ್ರಾರಂಭವಾಗಿತ್ತು. ಈ ಅಪ್ಲಿಕೇಶನ್‌ನ ಅತೀ ಮುಖ್ಯ ಪ್ರಯೋಜನವೆಂದರೆ ಡೇಟಾವನ್ನು ಕದಿಯುವ ಅಥವಾ ದೊಡ್ಡ ಟೆಕ್​ ಕಂಪನಿಗಳು ವಾಣಿಜ್ಯ ಲಾಭಕ್ಕಾಗಿ ಬಳಸುವುದರ ಬಗ್ಗೆ ನಾವು ಯಾವತ್ತೂ ಚಿಂತಿಸಬೇಕಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಆದ್ರೆ ಜನರು ಈ ಆ್ಯಪ್​ಗಳನ್ನ ಹೇಗೆ ಸ್ವೀಕರಿಸುತ್ತಾರೆ ಅನ್ನೋದು ಸಾರ್ವಜನಿಕವಾಗಿ ಅಪ್ಲಿಕೇಷನ್ ಬಿಡುಗಡೆ ಮಾಡಿದ ನಂತರವಷ್ಟೇ ಗೊತ್ತಾಗಲಿದೆ.

ಸಂದೇಸ್ ಹಾಗೂ ಸಂವಾದ್​ ಎರಡೂ ಆ್ಯಪ್​ಗಳನ್ನ ಸಾರ್ವಜನಿಕರ ಬಳಕೆಗೆ ರಿಲೀಸ್​ ಮಾಡ್ತಾರಾ ಅಥವಾ ಎರಡರಲ್ಲಿ ಒಂದು ಮಾತ್ರ ಜನರ ಬಳಕೆಗೆ ಲಭ್ಯವಾಗುತ್ತಾ ಅನ್ನೋದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಬೀಟಾ ಪರೀಕ್ಷೆ ಮುಗಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರೇ ರಾಷ್ಟ್ರಕ್ಕೆ ಈ ಆ್ಯಪ್ ಅರ್ಪಿಸುವ ನಿರೀಕ್ಷೆಯಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಕೆಲವು ಜನರಿಗೆ ಮಾತ್ರ ಪರೀಕ್ಷಾರ್ಥ ಪ್ರಯೋಗದ ಸಲುವಾಗಿ ಸಂದೇಸ್​ ಆ್ಯಪ್ ಸದ್ಯ ಆ್ಯಪಲ್ ಸ್ಟೋರ್​ನಲ್ಲಿ ಲಭ್ಯವಿದೆ. ಆ್ಯಪ್​ ಮೇಲೆ ಅಶೋಕ್ ಚಕ್ರ ಲೋಗೋ ಇದೆ. ಸದ್ಯಕ್ಕೆ ಈ ಆ್ಯಪ್​​ ಸರ್ಕಾರಿ ನೌಕರರನ್ನ ಮಾತ್ರ ವೆರಿಫೈ ಮಾಡುತ್ತಿದ್ದು, ಅವರ ಬಳಕೆಗೆ ಮಾತ್ರ ಲಭ್ಯವಾಗಿದೆ. ಎರಡರಲ್ಲಿ ಒಂದು ಅಪ್ಲಿಕೇಶನ್ ನನ್ನು ಮಾತ್ರ ಸಾರ್ವಜನಿಕರಿಗೆ ಬಿಡುಗಡೆ ಮಾಡಿ, ಮತ್ತೊಂದನ್ನ ಸರ್ಕಾರಿ ನೌಕರರ ಆಂತರಿಕ ಬಳಕೆಗಾಗಿ ಮಾತ್ರ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

- Advertisement -

Related news

error: Content is protected !!