Tuesday, July 21, 2026
spot_imgspot_img
spot_imgspot_img

ಕೇಪು ಗ್ರಾ.ಪಂ ನೇತೃತ್ವ ಮತ್ತು ಭಾರತೀಯ ಸಮಾಜ ಜೀವನ ಹಾಗೂ ಶಿಕ್ಷಣ ಸಂಶೋಧನಾ ಸಂಸ್ಥೆ (ರಿ.) ಕರವೀರ ಸಹಯೋಗದೊಂದಿಗೆ ವಿನೂತನ ನೈರ್ಮಲ್ಯ ಜಾಗೃತಿ ವಿಚಾರ ಸಂಕಿರಣ

- Advertisement -
- Advertisement -

ಕೇಪು ಗ್ರಾಮ ಪಂಚಾಯತ್‌‌ ನೇತೃತ್ವ ಮತ್ತು ಭಾರತೀಯ ಸಮಾಜ ಜೀವನ ಹಾಗೂ ಶಿಕ್ಷಣ ಸಂಶೋಧನಾ ಸಂಸ್ಥೆ (ರಿ.) ಕರವೀರ ಇದರ ಸಹಯೋಗದೊಂದಿಗೆ ಕೇಪು ಸರಕಾರಿ ಪ್ರೌಢಶಾಲೆಯ ಸಂಯೋಜಕತ್ವದಲ್ಲಿ ವಿನೂತನ ನೈರ್ಮಲ್ಯ ಜಾಗೃತಿ ವಿಚಾರ ಸಂಕಿರಣವು ಶಾಲಾ ಮುಖ್ಯಮಂತ್ರಿ ಲತೇಶ ಬಾಬು ಇವರ ಸಭಾಧ್ಯಕ್ಷತೆಯಲ್ಲಿ ನಡೆಯಿತು.

ವಿಚಾರ ಸಂಕಿರಣದಲ್ಲಿ ಶಾಲಾ ವಿದ್ಯಾರ್ಥಿಗಳಾದ ಗುಣಶ್ರೀ ಹಾಗೂ ಪ್ರೀತೇಶ ಇವರು ತಮ್ಮ ತಮ್ಮ ಮನೆ ಹಾಗೂ ಶಾಲೆಯ ಶುಚಿತ್ವದ ಬಗ್ಗೆ ವಿಚಾರಗಳನ್ನು ಮಂಡಿಸಿದರು. ಶಾಲಾ ಪ್ರಶಿಕ್ಷಣಾರ್ಥಿಯವರಾದ ಇಂದಿರಾ ಇವರು ನಾವೆಲ್ಲರೂ ಶುಚಿತ್ವ ಕಾಯ೯ದಲ್ಲಿ ಎಚ್ಚರವಹಿಸುವಂತೆ ಕರೆ ನೀಡಿದರು. ಸಹಶಿಕ್ಷಕ ಲಕ್ಷ್ಮಣ ಟಿ. ನಾಯ್ಕ ಮಾತನಾಡಿ “ಪ್ಲಾಸ್ಟಿಕ್ ಬಳಕೆಯ ದಷ್ಪರಿಣಾಮವನ್ನು ಒತ್ತಿ ಹೇಳುತ್ತಾ ಸರ್ವರ ಎಚ್ಚರದ ನೀತಿಯನ್ನು ತಿಳಿಸಿದರು”. ಗ್ರಾಮ ಪಂಚಾಯತ್‌ ಸದಸ್ಯ ಪುರುಷೋತ್ತಮ ಕಲ್ಲಂಗಳ ಸ್ವಚ್ಚವಾಹಿನಿ ಗಾಡಿಯ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.

ಕಾರ್ಯಯೋಜನೆಯ ಸಂಘಟಕ ಭಾಸ್ಕರ ಅಡ್ವಳ ಮಾತನಾಡಿ ಸಮಾಜದಲ್ಲಿ ಪರಿಸರ ಸ್ವಚ್ಛತೆ ಹಾಗೂ ಸಾಮಾಜಿಕ ಸ್ವಚ್ಛತೆ ಎರಡೂ ಮನಸ್ಸಿನ ಸ್ವಚ್ಛತೆ ಇದ್ದಾಗ ಮಾತ್ರ ಸಾಧ್ಯವಾಗುತ್ತದೆ. ಜನರ ಮನಸ್ಸಿನ ಸ್ವಚ್ಛತೆ ಇಲ್ಲದಲ್ಲಿ ಅಲ್ಲಲ್ಲಿ ವಿದ್ವಂಸಕ ಕೃತ್ಯಗಳು ನಡೆಯುತ್ತಿರುತ್ತವೆ. ಪಶುತ್ವ, ದಾನವತ್ವ ಕಾಡುತ್ತಿರುತ್ತವೆ. ಪರಿಸರ ಶುಚಿತ್ವವು ಹದ ಕೆಡುತ್ತಿರುತ್ತದೆ. ಸದ್ಗ್ರಂಥಗಳ ಅಧ್ಯಯನ ಹಾಗೂ ಸತ್ಸಂಗದಿಂದ ಮಾನಸಿಕ ಸ್ವಚ್ಛತೆಯನ್ನು ಕಾಪಾಡ ಬಹುದು. ಜೀವನ ಮೌಲ್ಯಗಳು, ವ್ಯಕ್ತಿತ್ವ ವಿಕಸನ ವಿಚಾರಗಳು ಮುಂತಾದವುಗಳ ಓದು ಎಲ್ಲಾ ಮನೆಗಳಲ್ಲೂ ನಡೆಯಬೇಕು. ಸಮಾಜದ ನೈರ್ಮಲ್ಯವು ಈಗಿರುವ ಹಂತದಿಂದ ಇನ್ನೂ ಉತ್ತಮಿಕೆಗೆ ಸಾಗಿಸಲು ಮಕ್ಕಳೆಲ್ಲರೂ ಜಾಗೃತರಾಗಿರುವ ಅತ್ಯಗತ್ಯತೆ ಬಗ್ಗೆ ವಿವರಿಸಿದರು.

ಮುಖ್ಯಶಿಕ್ಷಕಿ ಮಾಲತಿ ಕಾನತ್ತಡ್ಕ ಮಾತನಾಡಿ ಇದೊಂದು ವಿನೂತನ ನೈಮ೯ಲ್ಯ ಸಾಧಿಸುವ ಕಾಯ೯ವಾಗಿದೆ. ಸರ್ವಜನರು ಜಾಗೃತರಾಗಿ ಮುನ್ನಡೆಸುವ ಅಗತ್ಯತೆ ಬಗ್ಗೆ ತಿಳಿಸಿದರು. ಪಂಚಾಯತ್‌ ಸದಸ್ಯ ಜಗಜ್ಜೀವನ ರಾಮ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಗಿರಿಜಾ ಎನ್. ಉಪಸ್ಥಿತರಿದ್ದರು.

ಸಹಶಿಕ್ಷಕಿ ಶಾಂತಲ ಸ್ವಾಗತಿಸಿದರು. ಪ್ರಶಿಕ್ಷಣಾರ್ಥಿ ಅನನ್ಯ ಧನ್ಯವಾದಗೈದರು. ಸಹಶಿಕ್ಷಕ ರಮೇಶ ಡಿ. ನಿರೂಪಿಸಿದರು.

- Advertisement -

Related news

error: Content is protected !!