Friday, March 29, 2024
spot_imgspot_img
spot_imgspot_img

IPL2021: ಪಂಜಾಬ್​​​ ವಿರುದ್ಧ ಆರ್​ಸಿಬಿಗೆ 6 ರನ್​​ಗಳ ರೋಚಕ ಜಯ; ಪ್ಲೇ ಆಫ್​​ಗೆ ವಿರಾಟ್​​ ಪಡೆ

- Advertisement -G L Acharya panikkar
- Advertisement -
driving

ದುಬೈ: ಇಂದು ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​​​ 48ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೆ. ಎಲ್ ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.

ಟಾಸ್ ಗೆದ್ದ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆಯೇ ಆರ್​ಸಿಬಿ ನಿಗದಿತ 20 ಓವರ್​ನಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಅಮೋಘ ಬ್ಯಾಟಿಂಗ್ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 164 ರನ್​ ಕಲೆಹಾಕಿತ್ತು. ಈ ರನ್​​ಗಳ ಬೆನ್ನತ್ತಿದ್ದ ಪಂಜಾಬ್​​​ 6 ವಿಕೆಟ್​​ ನಷ್ಟಕ್ಕೆ 20 ಓವರ್​​ನಲ್ಲಿ 158 ರನ್​​ ಗಳಿಸಿ ಸೋತಿದೆ. ಸತತ ಮೂರು ಪಂದ್ಯಗಳನ್ನು ಗೆದ್ದ ಆರ್​ಸಿಬಿ ಈಗ ಪ್ಲೇ ಆಫ್​​ಗೆ ಅರ್ಹತೆ ಪಡೆದುಕೊಂಡಿದೆ.

ಆರ್​ಸಿಬಿ ಪರ ಗ್ಲೆನ್ ಮ್ಯಾಕ್ಸ್​ವೆಲ್ 57, ದೇವದತ್ ಪಡಿಕ್ಕಲ್ 40, ವಿರಾಟ್ ಕೊಹ್ಲಿ 25, ಎಬಿ ಡಿವಿಲಿಯರ್ಸ್ 23 ರನ್​​ ಗಳಿಸಿ ತಂಡ ಬೃಹತ್​​ ಮೊತ್ತ ಕಲೆ ಹಾಕಲು ಕಾರಣರಾದರು.

ಪಂಜಾಬ್​​ ಪರ ಕೆಎಲ್ ರಾಹುಲ್ 39, ಮಯಾಂಕ್ ಅಗರ್ವಾಲ್ 57, ಶಾರುಖ್ ಖಾನ್ 16, ಮೊಯಿಸ್ ಹೆನ್ರಿಕ್ಸ್ 12 ರನ್​​ ಗಳಿಸಿದ್ದರು.

- Advertisement -

Related news

error: Content is protected !!