Tuesday, June 23, 2026
spot_imgspot_img
spot_imgspot_img

ಮಾಣಿ :(ಜ. 13) ಪೆರಾಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ “ತಾಂಬೂಲ ಪ್ರಶ್ನಾರಾಶಿ ಚಿಂತನೆ”

- Advertisement -
- Advertisement -

ಮಾಣಿ : ಪೆರಾಜೆ, ಮಾಣಿ ಹಾಗೂ ಅರೆಬೆಟ್ಟು ಗ್ರಾಮಗಳಿಗೆ ಸಂಬಂಧಿಸಿದ ಬಂಟ್ವಾಳ ತಾಲೂಕು ಪೆರಾಜೆ ಗ್ರಾಮದಲ್ಲಿರುವ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸುತ್ತು ಪೌಳಿಯೇ ಮೊದಲಾದ ಜೀರ್ಣೋದ್ಧಾರ ಯೋಜನೆಯ ಪೂರ್ವಭಾವಿಯಾಗಿ ದಿನಾಂಕ 13-01-2024ನೇ ಶನಿವಾರ ಬೆಳಿಗ್ಗೆ ಘಂಟೆ 9.00 ರಿಂದ ನೀಲೇಶ್ವರ ಶ್ರೀ ಪದ್ಮನಾಭ ಉಚ್ಚಿಲತ್ತಾಯ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಸಿ. ವೇಣುಗೋಪಾಲ ಪೊದುವಾಳ್ ಇವರು ತಾಂಬೂಲ ಪ್ರಶ್ನಾರಾಶಿ ಚಿಂತನೆಯ ಮೂಲಕ ಮಾರ್ಗದರ್ಶನವನ್ನು ಮಾಡಲಿರುವರು.

ಕಾರ್ಯಕ್ರಮದಲ್ಲಿ ಗ್ರಾಮಸ್ಥರೆಲ್ಲರೂ ಭಾಗವಹಿಸಿ ಶ್ರೀದೇವರ ಕೃಪೆಗೆ ಪಾತ್ರರಾಗಬೇಕಾಗಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಜೀರ್ಣೋದ್ಧಾರ ಸಮಿತಿ, ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ವ್ಯವಸ್ಥಾಪನಾ ಸಮಿತಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಪೆರಾಜೆ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!