Monday, September 28, 2026
spot_imgspot_img
spot_imgspot_img

ಕಡಬ: ಕಾಡಾನೆ ದಾಳಿ – ಅಪಾರ ಪ್ರಮಾಣದ ಕೃಷಿ ನಾಶ

- Advertisement -
- Advertisement -

ಕಡಬ: ಕಡಬಕ್ಕೆ ಕಾಡಾನೆ ಆಗಮಿಸಿ ಹಿಂತಿರುಗಿ ಹೋದ ಬೆನ್ನಲ್ಲೇ ಇತ್ತ ಗುಂಡ್ಯ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಅನಿಲ ಎಂಬಲ್ಲಿಯೂ ಕಾಡಾನೆ ಕಂಡುಬಂದಿದ್ದು, ಅಪಾರ ಕೃಷಿ ನಾಶಮಾಡಿದ್ದು,
ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ತೊಂದರೆಯಾಗಿ ಪರಿಣಮಿಸಿದೆ.

ರಾತ್ರಿ ವೇಳೆಯಲ್ಲಿ ಸುಬ್ರಹ್ಮಣ್ಯ ಸಮೀಪದ ಅನಿಲ ನಿವಾಸಿಗಳಾದ ಕೇಶವ್, ವೆಂಕಟೇಶ್ ಮೊದಲಾದವರ ತೋಟಕ್ಕೆ ನುಗ್ಗಿದ ಕಾಡಾನೆಯು ತೋಟದಲ್ಲಿದ್ದ ಬಾಳೆ ಕೃಷಿಯನ್ನು ನಾಶಪಡಿಸಿದೆ.

ಆನೆ ಬಂದ ವಿಷಯ ತಿಳಿದ ಸ್ಥಳೀಯರು ಆನೆಯನ್ನು ಓಡಿಸಿದರೂ ಆನೆ ಮಾತ್ರ ಈ ಪರಿಸರ ಬಿಟ್ಟು ಹೋಗಿಲ್ಲ. ಆನೆಯು ರಾಜ್ಯ ಹೆದ್ದಾರಿಯತ್ತ ಚಲಿಸಿದ್ದು, ಕೈಕಂಬದಿಂದ ಗುಂಡ್ಯ ಮಾರ್ಗವಾಗಿ ರಾತ್ರಿ ಸಂಚರಿಸುವವರು ಎಚ್ಚರಿಕೆ ವಹಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

- Advertisement -

Related news

error: Content is protected !!