Friday, July 24, 2026
spot_imgspot_img
spot_imgspot_img

ಕಡಂಬು: ಹೆದ್ದಾರಿ ಬದಿ ಬೇಕಾಬಿಟ್ಟಿ ತ್ಯಾಜ್ಯಗಳ ರಾಶಿ; ಎಚ್ಚೆತ್ತುಕೊಳ್ಳದ ವಿಟ್ಲ ಪಡ್ನೂರು ಗ್ರಾ.ಪಂ ವಿರುದ್ಧ ಬ್ಯಾನರ್ ಹಾಕಿ ಆಕ್ರೋಶ ಹೊರಹಾಕಿದ ನಾಗರಿಕರು

- Advertisement -
- Advertisement -

ಕಡಂಬು: ರಾಜ್ಯ ಹೆದ್ದಾರಿ ಬದಿಯ ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೇಕಾಬಿಟ್ಟಿ ಕಸ, ತ್ಯಾಜ್ಯ ಎಸೆಯುತ್ತಿದ್ದರೂ ಕಾನೂನು ಕ್ರಮ ಕೈಗೊಳ್ಳದ ಪಂಚಾಯತ್ ಆಡಳಿತ ವಿರುದ್ಧ ಬ್ಯಾನರ್ ಹಾಕುವ ಮೂಲಕ ನಾಗರಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಟ್ಲ-ಸಾಲೆತ್ತೂರು ರಸ್ತೆಯ ಕಡಂಬು ಸೇತುವೆ ಬಳಿ ಹಾಗೂ ತೋಡಿನಲ್ಲಿ ಬೇಕಾಬಿಟ್ಟಿ ತ್ಯಾಜ್ಯಗಳು ರಾಶಿ ಬಿದ್ದು ಪರಿಸರವಿಡೀ ದುರ್ನಾತ ಬೀರುತ್ತಿದೆ. ತ್ಯಾಜ್ಯಗಳ ತಿನ್ನಲು ಬರುವ ಬೀದಿ ನಾಯಿಗಳಿಂದಾಗಿ ದ್ವಿಚಕ್ರ ವಾಹನ ಸವಾರರು ಸಂಚರಿಸುವುದು ಅಸಾಧ್ಯವಾಗಿದೆ. ಈ ಬಗ್ಗೆ ವಿಟ್ಲ ಪಡ್ನೂರು ಗ್ರಾಮ ಪಂಚಾಯತಿಗೆ ಸ್ಥಳೀಯರು ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಇದರಿಂದಾಗಿ ಆಕ್ರೋಶಗೊಂಡ ಸ್ಥಳೀಯರು ಪಂಚಾಯತ್ ಅಧಿಕಾರಿಗಳು, ಆಡಳಿತ ಹಾಗೂ ಸದಸ್ಯರುಗಳ ವಿರುದ್ಧ ಛೀಮಾರಿ ಹಾಕಿ ಬ್ಯಾನರ್ ಅಳವಡಿಸಿದ್ದಾರೆ. ಇನ್ನಾದರೂ ಪಂಚಾಯತ್ ಆಡಳಿತ ಸಮಸ್ಯೆ ಬಗ್ಗೆ ಎಚ್ಚೆತ್ತುಕೊಳ್ಳಲಿ ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

- Advertisement -

Related news

error: Content is protected !!