Friday, July 24, 2026
spot_imgspot_img
spot_imgspot_img

ಅಜಾಗರೂಕತೆಯಿಂದ ಬೈಕ್ ಚಲಾಯಿಸಿ ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಗೆ ಡಿಕ್ಕಿ.

- Advertisement -
- Advertisement -

ವಿಟ್ಲ:- ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಗೆ ಬೈಕ್‌ನ್ನು ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಗೆ ಗಂಭೀರ ಗಾಯಗೊಂಡ ಘಟನೆ ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ಬಂಡಿತ್ತಡ್ಕ ಎಂಬಲ್ಲಿ ನಡೆದಿದೆ.

ಕೆ ಪಿ ಸೀತರಾಮ ಭಟ್(79) ಎಂಬವರು ಮಣ್ಣು ರಸ್ತೆಯ ಬದಿಯಲ್ಲಿ ನಿಂತು ಕೊಂಡಿರುವಾಗ  ಕನ್ಯಾನ ಕಡೆಯಿಂದ ಕೆ ಎ 70 ಹೆಚ್ 2088 ಮೋಟಾರ್ ಬೈಕ್‌ ನ್ನು   ಅಜಾಗರುಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು
ಸೀತರಾಮ ಭಟ್ ರಿಗೆ ಡಿಕ್ಕಿ ಹೊಡೆದ ಪರಿಣಾಮ ಮೋಟರ್ ಸೈಕಲ್ ಸಮೇತ ಸವಾರರಿಬ್ಬರಿಗೆ ಗಾಯವಾಗಿದೆ.

 ಸೀತರಾಮ ಭಟ್ ನೆಲಕ್ಕೆ ಬಿದ್ದು ಪರಿಣಾಮ ಹಣೆಯ ಬಲಭಾಗಕ್ಕೆ,ಬಲಕಾಲಿನ ಮೊಣಗಂಟಿಗೆ ಮತ್ತು ದವಡೆಗೆ ಸಾಮಾನ್ಯ ತರಹದ ಗಾಯವಾಗಿರುತ್ತದೆ .ಆರೋಪಿ ಮೋಟಾರ್ ಸೈಕಲ್ ಸವಾರ ಹಾಗೂ ಸಹಸವಾರರಿಗೆ ಕೂಡಾ  ಗಾಯವಾಗಿದೆ. ಸೀತರಾಮ ಭಟ್ ರ  ಮಗ ಕೆಪಿ ಶಿವಮೂರ್ತಿ ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ನಂತರ ಹೆಚ್ಚಿನ ಚಿಕೆತ್ಸೆಗಾಗಿ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ವಿಟ್ಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

- Advertisement -

Related news

error: Content is protected !!