Friday, April 19, 2024
spot_imgspot_img
spot_imgspot_img

ಕಾರ್ಕಳ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; FIR ದಾಖಲು!

- Advertisement -G L Acharya panikkar
- Advertisement -
driving

ಕಾರ್ಕಳ: ಅಪ್ರಾಪ್ತ ಬಾಲಕಿಯ ಮೇಲೆ ಹಲವಾರು ಬಾರಿ ಅತ್ಯಾಚಾರ ಮಾಡಿ ಬೆದರಿಸಿ , ಹಲ್ಲೆ ಮಾಡಿದ ಘಟನೆ ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ಕಾರ್ಕಳದ ಬಂಗ್ಲೆಗುಡ್ಡೆಯ ನಿಯಾಜ್ ಎನ್ನಲಾಗಿದೆ.

ಆರೋಪಿಯೂ ದೂರುದಾರರು ಅಪ್ರಾಪ್ತೆಯಾಗಿದ್ದ ಸಮಯದಲ್ಲಿ ಕಾಲ್ ಮಾಡಿದ್ದು, ಮಾತನಾಡಿದಾಗ ತಪ್ಪಿ ಕರೆ ಬಂದಿದ್ದಾಗಿ ತಿಳಿಸಿ , ಬಳಿಕ ಪದೇ ಪದೇ ಕರೆ ಮಾಡಿ ಸಲುಗೆ ಬೆಳೆಸಿದ್ದ. ಕಳೆದ ವರ್ಷ ಮೇ.30 ರಂದು ಬಂಗ್ಲೆಗುಡ್ಡೆಯಲ್ಲಿರುವ ತನ್ನ ಮನೆಗೆ ಯಾರೂ ಇಲ್ಲದ ಸಮಯ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿ ಆ ಬಳಿಕವೂ ಹಲವಾರು ಬಾರಿ ಅತ್ಯಾಚಾರ ನಡೆಸಿದ್ದ.

ಇದಾದ ಬಳಿಕ ಸೆ.23 ರಂದು ತನ್ನ ಜೊತೆ ಬರಬೇಕೆಂದು ಬಲವಂತ ಮಾಡಿ ಕಾರ್ಕಳ ಬಸ್ ಸ್ಟಾಂಡ್‌ನಿಂದ ಮೋಟಾರ್ ಸೈಕಲಿನಲ್ಲಿ ಪತ್ತೊಂಜಿಕಟ್ಟೆ ಸಾಮಿಲ್ ಬಳಿ ಕರೆದುಕೊಂಡು ಹೋಗಿ ಕೈಯಿಂದ ಕೆನ್ನೆಗೆ ಹೊಡೆದು ಬ್ಯಾಗಿನಲ್ಲಿದ್ದ ಮೊಬೈಲ್ ಫೋನನ್ನು ಕಸಿದುಕೊಂಡು ಹೋಗಿದ್ದಾನೆ ಎನ್ನಲಾಗಿದೆ. ಈ ಘಟನೆಯ ಆರೋಪಿಯ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!