Sunday, May 5, 2024
spot_imgspot_img
spot_imgspot_img

ವಿಟ್ಲ: ಕೊಳ್ನಾಡು ಗ್ರಾಮದ ಸುತ್ತಮುತ್ತ ಚಿರತೆ ಕಾಟ; ಸ್ಥಳೀಯರಿಂದ ಆಪರೇಷನ್ ಚೀತಾ ಕಾರ್ಯಾಚರಣೆ

- Advertisement -G L Acharya panikkar
- Advertisement -

ವಿಟ್ಲ: ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಮಾದಕಟ್ಟೆ, ಪಡಾರು, ಬಾರೆಬೆಟ್ಟು, ಮುಂಡತ್ತಜೆ, ತಾಳಿತ್ತನೂಜಿ ಮತ್ತು ಪಂಜಿಗದ್ದೆ ಸುತ್ತಮುತ್ತ ಕಳೆದ ಒಂದು ತಿಂಗಳಿಂದ ಎರಡು ಚಿರತೆಗಳು ಸುತ್ತಾಡುತ್ತಿವೆ.

ಕತ್ತಲಾಗುತ್ತಿದ್ದಂತೆ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಅಡ್ಡಬರುತ್ತಿರುವ ಚಿರತೆಗಳು ಬಳಿಕ ಗುಡ್ಡದಲ್ಲಿ ಮರೆಯಾಗುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡುತ್ತಿದ್ದರೂ ಎರಡು ಬಾರಿ ಮಾತ್ರ ಭೇಟಿ ನೀಡಿದ್ದ ಅರಣ್ಯ ಅಧಿಕಾರಿಗಳು ಬಳಿಕ ಮರೆಯಾಗಿದ್ದಾರೆಂದು ಜನ ಆರೋಪಿಸಿದ್ದಾರೆ.

ಬೋನು ತಂದಿಡುವಂತೆ ಸ್ಥಳೀಯರು ಒತ್ತಾಯಿಸಿದಾಗ ಶನಿವಾರ ತಂದಿಡುತ್ತೇವೆ ಎಂದು ಹೇಳಿ ಹೋಗಿದ್ದ ಅರಣ್ಯ ಅಧಿಕಾರಿಗಳು ಮೂರು ವಾರಗಳು ಕಳೆದರೂ ಇತ್ತ ಕಡೆ ತಲೆ ಹಾಕಿಲ್ಲವೆಂದು ಇಲ್ಲಿನ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅರಣ್ಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ರೋಸಿ ಹೋಗಿರುವ ಸ್ಥಳೀಯ ಯುವಕರು ಶುಕ್ರವಾರ ಸಂಜೆ ಸಭೆ ಸೇರಿದ್ದು ಶನಿವಾರದಿಂದ ಆಪರೇಶನ್ ಚೀತಾ ಕಾರ್ಯಾಚರಣೆ ನಡೆಸುವುದಾಗಿ ತೀರ್ಮಾನಿಸಿದ್ದಾರೆ.

- Advertisement -

Related news

error: Content is protected !!