Sunday, July 19, 2026
spot_imgspot_img
spot_imgspot_img

ಕುಂಡಡ್ಕ: ವಿಷ್ಣು ಫ್ರೆಂಡ್ಸ್ ವತಿಯಿಂದ ದಿ| ಉಮೇಶ್ ಗೌಡ ಅರ್ಕಲ್ ತೋಟ ಇವರ ಸ್ಮರಣಾರ್ಥ ನೂತನ ಬಸ್‌ಸ್ಟ್ಯಾಂಡ್ ಲೋಕಾರ್ಪಣೆ

- Advertisement -
- Advertisement -

ಕುಂಡಡ್ಕ: ವಿಷ್ಣು ಫ್ರೆಂಡ್ಸ್, ಇವರ ವತಿಯಿಂದ ದಿ|ಉಮೇಶ್ ಗೌಡ ಅರ್ಕಲ್ ತೋಟ ಇವರ ಸ್ಮರಣಾರ್ಥ ನೂತನ ಬಸ್‌ಸ್ಟ್ಯಾಂಡ್ ಲೋಕಾರ್ಪಣೆ ಕಾರ್ಯಕ್ರಮವು ಜ.26 ರ ಸೋಮವಾರದಂದು ಕುಂಡಡ್ಕ ಜಂಕ್ಷನ್ ನಲ್ಲಿ ನಡೆಯಿತು.

ನೂತನ ಬಸ್‌ಸ್ಟ್ಯಾಂಡ್ ನ್ನು ವಿಧಾನ ಪರಿಷತ್ ಸದಸ್ಯರಾದ ಕಿಶೋರ್‍ ಕುಮಾರ್‍ ಪುತ್ತೂರು ದೀಪ ಬೆಳಗಿಸಿ ಉದ್ಘಾಟಿಸಿದರು. ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರು-ಬಿಜೆಪಿ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು.

ಕುಂಡಡ್ಕ ಜಂಕ್ಷನ್ ನಲ್ಲಿರುವ ಛತ್ರಪತಿ ಶಿವಾಜಿಯ ಪ್ರತಿಮೆಗೆ ವಿಧಾನ ಪರಿಷತ್ ಸದಸ್ಯರಾದ ಕಿಶೋರ್‍ ಕುಮಾರ್ ರವರು ಹಾರಾರ್ಪಣೆ ಮಾಡಿ, ನಂತರ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು, ಬಳಿಕ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ, ರಾಮದಾಸ್ ಶೆಟ್ಟಿ ಆಡಳಿತ ನಿರ್ದೇಶಕರು ವಿ ಟಿವಿ ನ್ಯೂಸ್, ಪುನೀತ್ ಮಾಡತ್ತಾರು ಅಧ್ಯಕ್ಷರು, ಗ್ರಾಮ ಪಂಚಾಯತ್ ವಿಟ್ಲ ಮುಡ್ನೂರು, ಪ್ರಸನ್ನ ಮಾರ್ತಾ ಉಪಾಧ್ಯಕ್ಷರು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ, ಶಿವಕುಮಾರ್ ಅಧ್ಯಕ್ಷರು, ಪುತ್ತೂರು ಬಿಜೆಪಿ ನಗರ ಮಂಡಲ, ಸಾಜ ರಾಧಾಕೃಷ್ಣ ಆಳ್ವ, ವೇಣುಗೋಪಾಲ್ ಶೆಟ್ಟಿ ಅಧ್ಯಕ್ಷರು, ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಆಡಳಿತ ಸಮಿತಿ, ಲಿಂಗಪ್ಪ ಅರ್ಕಲ್ ತೋಟ ಗ್ರಾಮ ಸಹಾಯಕರು, ವಿಟ್ಲ, ಶ್ರೀಮತಿ ಚಂದ್ರಾವತಿ ಅರ್ಕಲ್ ತೋಟ ಸದಸ್ಯರು, ಗ್ರಾಮ ಪಂಚಾಯತ್ ವಿಟ್ಲ ಮುಡ್ನೂರು, ಗೋವಿಂದ ರಾಜ್ ಪೆರ್ವಾಜೆ ವಕೀಲರು, ಅಕ್ಷಯ ರಜಪೂತ್ ಹಿಂದೂ ಮುಖಂಡರು, ಉಪಸ್ಥಿತರಿದ್ದರು.

ಉಮೇಶ್ ಗೌಡ ಅರ್ಕಲ್ ತೋಟರವರು ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಸದಸ್ಯರಾಗಿ, ಬಿಜೆಪಿ ಬೂತ್ ಅಧ್ಯಕ್ಷರಾಗಿ ಉತ್ತಮ ವ್ಯಕ್ತಿತ್ವ ಹೊಂದಿದ್ದು, ಎಲ್ಲಾ ಜನರ ಪ್ರೀತಿಗೆ ಪಾತ್ರರಾಗಿದ್ದರು. ಅನಾರೋಗ್ಯದಿಂದ ಕೆಲ ಸಮಯಗಳ ಹಿಂದೆ ಅವರು ನಿಧನರಾಗಿದ್ದರು. ಇವರು ಮಾಡಿದ ಜನ ಸೇವೆಯ ಪ್ರತಿರೂಪವಾಗಿ ವಿಷ್ಣು ಫ್ರೆಂಡ್ಸ್ ನ ಪದಾಧಿಕಾರಿಗಳು ಊರವರ ಸಹಕಾರದೊಂದಿಗೆ ಬಸ್‌ಸ್ಟ್ಯಾಂಡ್ ನಿರ್ಮಿಸಿದ್ದಾರೆ.

ವಿಷ್ಣು ಫ್ರೆಂಡ್ಸ್ ನ ಅಧ್ಯಕ್ಷರಾದ ದಕ್ಷಿತ್ ಮತ್ತು ಸದಸ್ಯರು ಅತಿಥಿಗಳನ್ನು ಸ್ವಾಗತಿಸಿದರು. ಅವಿನಾಶ್ ಪೂಜಾರಿ ಮರುವಾಳ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ಬಸ್‌ಸ್ಟ್ಯಾಂಡ್ ನಿರ್ಮಿಸಲು ಸಹಕರಿಸಿದ ಊರ ಮಹನೀಯರನ್ನು ಗೌರವಿಸಲಾಯಿತು.

- Advertisement -

Related news

error: Content is protected !!