ಆರೋಪಿಗಳು ಸಲ್ಲಿಸಿದ ಜಾಮೀನು ಅರ್ಜಿಗಳನ್ನು ವಜಾಗೊಳಿಸಿದ ನ್ಯಾಯಾಲಯ

ಏ. 27 ರಂದು ಮದ್ಯಾಹ್ನ ಸುಮಾರು 3-00 ಗಂಟೆಗೆ ಮಂಗಳೂರು ಕುಡುಪು ಭಟ್ರ ಕಲ್ಲುರ್ಟಿ ದೈವಸ್ಥಾನದ ಹಿಂಬದಿಯ ಮೈದಾನದಲ್ಲಿ ಕ್ರಿಕೆಟ್ ಮ್ಯಾಚ್ ನಡೆಯುತ್ತಿರುವ ಸಮಯ ಮೊಹಮ್ಮದ್ ಅಶ್ರಫ್ ಎಂಬಾತನಿಗೆ ಕೈಯಿಂದ ಹಲ್ಲೆ ನಡೆಸಿ ಕಾಲಿನಿಂದ ದೇಹದ ವಿವಿಧ ಭಾಗಗಳಿಗೆ ತುಳಿದು, ಕೋಲಿನಿಂದ ಆತನ ದೇಹದ ವಿವಿಧ ಭಾಗಗಳಿಗೆ ಹಲ್ಲೆ ನಡೆಸಿದ ಪರಿಣಾಮ ಈ ಗುಂಪು ಹಲ್ಲೆಯಿಂದ ಮೊಹಮ್ಮದ್ ಅಶ್ರಫ್ ಎಂಬವರು ಕೊಲೆಯಾಗಿರುತ್ತಾರೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಅ.ಕ್ರ: 37/2025 ಕಲಂ: 189 (2), 191 (1) (3), 115 (2), 103 (2), 240, ಜತೆಗೆ 190 ಭಾರತೀಯ ನ್ಯಾಯ ಸಂಹಿತೆರಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
ಈ ಪ್ರಕರಣದಲ್ಲಿ 21 ಆರೋಪಿಗಳನ್ನು ದಸ್ತಗಿರಿ ಮಾಡಲಾಗಿರುತ್ತದೆ. ಆರೋಪಿಗಳಾದ 1)ಅನಿಲ್ ಕುಮಾರ್, 2)ಸಾಯಿದೀಪ್, 3)ಅನಿಲ್ ಕೋಟಿಮುರ, 4)ಮನೀಷ್ ಶೆಟ್ಟಿ, 5)ಪ್ರದೀಪ್ ಕುಮಾರ್, 6)ವಿವಿಯನ್ ಅಲ್ವಾರಿಸ್, 7)ಶ್ರೀದತ್ತಾ, 8)ಧನುಷ್ ಮತ್ತು 9)ಕಿಶೋರ್ ಕುಮಾರ್* ರವರುಗಳು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ದಿನಾಂಕ 15-07-2025 ರಂದು ಜಾಮೀನು ಅರ್ಜಿ ವಿಚಾರಣೆ ನಡೆಸಲಾಗಿದ್ದು, ಸರ್ಕಾರದ ಪರವಾಗಿ ನೇಮಿಸಲಾಗಿರುವ ವಿಶೇಷ ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದ್ದು, *ಉಚ್ಚ ನ್ಯಾಯಾಲಯವು ಎಲ್ಲಾ ಆರೋಪಿಗಳ ಜಾಮೀನು ಅರ್ಜಿಯನ್ನು ವಜಾಗೊಳಿಸಿರುತ್ತದೆ.








