


ಹೊಸ ತಂತ್ರಜ್ಞಾನಗಳೊಂದಿಗೆ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ಕೇಂದ್ರ, ಪಿಸಿಯೋಥೆರಫಿ, ಡಯಾಲಿಸಿಸ್ ಕೇಂದ್ರ, ದಂತ ಚಿಕಿತ್ಸಾ ವಿಭಾಗಕ್ಕೆ ಚಾಲನೆ
ಮಂಗಳೂರು: ಪಡೀಲ್ ನಲ್ಲಿರುವ ಜನಪ್ರಿಯ ಮಲ್ಟಿಸ್ಪೆಷಲಿಟಿ ಆಸ್ಪತ್ರೆಯ ಯಶಸ್ವಿ ಪ್ರಥಮ ವರ್ಷದ ಆಚರಣೆ ಪ್ರಯುಕ್ತ ನೂತನವಾಗಿ ಪ್ರಾರಂಭಿಸಲಾದ 4 ವಿಶೇಷ ಚಿಕಿತ್ಸಾ ಕೇಂದ್ರದ ವಿಭಾಗಗಳ ಉದ್ಘಾಟನಾ ಸಮಾರಂಭ ಮಂಗಳವಾರ ನಡೆಯಿತು.
ಅತ್ಯಾಧುನಿಕ ಉಪಕರಣಗಳು ಮತ್ತು ಹೊಸ ತಂತ್ರಜ್ಞಾನಗಳೊಂದಿಗೆಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ಕೇಂದ್ರ, ಪಿಸಿಯೋಥೆರಫಿ, ಡಯಾಲಿಸಿಸ್ ಮತ್ತು ದಂತ ಚಿಕಿತ್ಸಾ ವಿಭಾಗವನ್ನು ಸ್ಥಾಪಿಸಲಾಗಿದ್ದು, ಸಯ್ಯದ್ ಉಲಮಾ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸಿದರು. ಬಳಿಕ ದುವಾಃ ನೆರವೇರಿಸಿ ಮಾತನಾಡಿದ ಅವರು ಜನಪ್ರಿಯ ಆಸ್ಪತ್ರೆ ನಿರ್ಮಾಣದ ಉದ್ದೇಶ ಲಾಭದ ಉದ್ದೇಶಕ್ಕೆ ಅಲ್ಲ. ಜನರಿಗೆ ಸೇವೆ ನೀಡುವ ಉದ್ದೇಶ ಇಟ್ಟು ಕೊಂಡಿದೆ. ನಾನು ತಿಳಿದಿರುವ ವೈದ್ಯರು ಇಲ್ಲಿದ್ದು, ಅವರ ಉದ್ದೇಶವೇ ಸೇವೆ ನೀಡುವುದಾಗಿದೆ. ಸೇವೆ ಎಂಬುದು ಪ್ರಮುಖ ಅಂಗವಾಗಿದೆ. ಮುಂದಿನ ದಿನಗಳಲ್ಲಿ ಈ ಆಸ್ಪತ್ರೆ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಶುಭ ಹಾರೈಸಿದರು. ಜನಪ್ರಿಯ ಫೌಂಡೆಶನ್ ನ ಚೇಯರ್ ಮ್ಯಾನ್ ಡಾ. ಅಬ್ದುಲ್ ಬಶೀರ್ ವಿ.ಕೆ ಅವರು ಮಾತನಾಡಿ ಎಲ್ಲರ ಸಹಕಾರದಲ್ಲಿ ಮಂಗಳೂರಿನ ಜನಪ್ರಿಯ ಆಸ್ಪತ್ರೆ ಯಶಸ್ವಿಯಾಗಿ ಒಂದು ವರ್ಷ ಪೂರ್ತಿಗೊಳಿಸಿದೆ.
ಇದೀಗ ಜನರಿಗೆ ಇನ್ನಷ್ಟು ಸೇವೆ ನೀಡುವ ಉದ್ದೇಶದಿಂದ ವಿಶೇದ 4 ವಿಭಾಗಗಳನ್ನು ಸ್ಥಾಪಿಸಲಾಗಿದೆ ಎಂದರು. ಡಾ. ಯು.ಟಿ ಇಫ್ತಿಕಾರ್ ಅಲಿ ಫರೀದ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭ ಹಾರೈಸಿದರು. ಇರ್ಷಾದ್ ದಾರಿಮಿ ಮಿತ್ತಬೈಲು, ಬಿ.ಎಂ ಶರೀಫ್, ರಿಯಾಝ್ ಬಾವ , ಎಸ್ ಎಂ ಮುಸ್ತಫಾ, ಟಿ.ಎಂ ಶಾಹೀದ್ ತೆಕ್ಕಿಲ್, ಡಾ. ಸಚೀದಾನಂದ ರೈ, ಅಬ್ದುಲ್ ಖಾದರ್ ಬದ್ರಿಯಾ, ನಸ್ರೀನಾ ಬಶೀರ್, ಡಾ. ಶಾರೂಖ್ ಅಬ್ದುಲ್ಲ, ಹನೀಫ್ ಹಾಜಿ ಗೋಳ್ತಮಜಲು, ಆಸೀಫ್ ಡೀಲ್ಸ್, ಜಬ್ಬಾರ್ ಮಾರಿಮಳ್ಳ, ಎನ್ ಎಸ್ ಕರೀಮ್ , ಮೊಹಮ್ಮದ್ ಕಲಾವರ್, ಹಸನಬ್ಬ ಚಾರ್ಮಾಡಿ, ಡಾ. ನೂಮನ್, ಡಾ. ಸಚಿನ್, ಜೀಯಾ, ಮಹಮ್ಮದ್ ಹಾಜಿ ಕುಕ್ಕುವಳ್ಳಿ, ಇಬ್ರಾಹಿಂ ನಮಾಝ್ ಬಡಕಬೈಲು, ಅಶ್ರಫ್ ಕಲ್ಲೇಗ, ಸಿರಾಜ್ ಮಣಿಲ, ಜನಪ್ರಿಯ ಆಸ್ಪತ್ರೆಯ ವ್ಯವಸ್ಥಾಪಕ ಮಹಮ್ಮದ್ ಇಕ್ಬಾಲ್ ವಿಟ್ಲ, ಉಪಸ್ಥಿತರಿದ್ದರು.ಡಾ. ಅಬ್ದುಲ್ ಬಶೀರ್ ವಿ.ಕೆ ಸ್ವಾಗತಿಸಿದರು. ಡಾ. ಕಿರಾಶ್ ಪರ್ತಿಪ್ಪಾಡಿ ಪ್ರಸ್ತಾವನೆ ಮಾಡಿದರು.ಬಾತೀಶ್ ಅಳಕೆಮಜಲು ನಿರೂಪಿಸಿದರು.








