Sunday, July 19, 2026
spot_imgspot_img
spot_imgspot_img

ಮಂಗಳೂರು: ತತ್ವ ಸ್ಕೂಲ್ ಆರ್ಟ್ ವಿದ್ಯಾರ್ಥಿಗಳಿಂದ ಕಲಾ ಪ್ರದರ್ಶನ – ಗಣ್ಯಾತಿಗಣ್ಯರಿಂದ ಪ್ರಶಂಸೆ

- Advertisement -
- Advertisement -

ವಿಟ್ಲದ ವಿದ್ಯಾರ್ಥಿಗಳ ಕಲಾಕುಂಚ - ವಿಶಿಷ್ಟ ಕಾರ್ಯಕ್ರಮಕ್ಕೆ‌ ಶ್ಲಾಘನೆಯ ಭರಪೂರ

ಮಂಗಳೂರು: ತತ್ವ ಸ್ಕೂಲ್ ಆಫ್ ಆರ್ಟ್, ವಿಟ್ಲ ಇಲ್ಲಿನ‌ ಕಲಾ ವಿದ್ಯಾರ್ಥಿಗಳ ಚಿತ್ರಕಲಾ‌ ಪ್ರದರ್ಶನ ನಗರದ ವರ್ಣ ಆರ್ಟ್ ಗ್ಯಾಲೆರಿಯಲ್ಲಿ ಉದ್ಘಾಟನೆಗೊಂಡಿದೆ.

ಮಂಗಳೂರು ನಗರದ ಗೋವಿಯಸ್ ಕಾಂಪ್ಲೆಕ್ಸ್ ನ ವರ್ಣ ಆರ್ಟ್ ಗ್ಯಾಲೆರಿಯಲ್ಲಿ ಕಲಾ ಪ್ರದರ್ಶನ ನಡೆಯುತ್ತಿದೆ. ಶಾರದಾ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ. ಎಂ ಬಿ ಪುರಾಣಿಕ್ ಕಲಾ ಪ್ರದರ್ಶನವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ ವೇದವ್ಯಾಸ್ ಕಾಮತ್, ಸಂತ ಆಲೋಷಿಯಸ್ ಪ್ರೌಢ ಶಾಲೆಯ ಕಲಾಶಿಕ್ಷಕ ಜಾನ್ ಚಂದ್ರನ್, ಕರಾವಳಿ ಚಿತ್ರಕಲಾ ಚಾವಡಿ (ರಿ.) ಮಂಗಳೂರು ಇದರ ಗೌರವ ಅಧ್ಯಕ್ಷ ಗಣೇಶ್ ಸೋಮಯಾಜಿ ಆಗಮಿಸಿ ಕಲಾ ವಿದ್ಯಾರ್ಥಿಗಳ ಕಲೆಗೆ ಪ್ರೋತ್ಸಾಹ ನೀಡಿ ಶುಭಹಾರೈಸಿದರು. ವರ್ಣ ಸ್ಕೂಲ್ ಆಫ್ ಆರ್ಟ್ ಮಂಗಳೂರು ಇದರ ನಿರ್ದೇಶಕ ರೋಹಿತ್ ಕುಮಾರ್ ಸಂಪೂರ್ಣ ಸಹಕಾರ ನೀಡಿದರು.

ಏನೆಲ್ಲಾ ವಿಶೇಷತೆ ಇದೆ.?
ತತ್ವ ಸ್ಕೂಲ್ ಆಫ್ ಆರ್ಟ್‌ನಲ್ಲಿ ಮಕ್ಕಳಿಗೆ, ಯವಕ, ಯುವತಿಯರಿಗೆ ವಿವಿಧ ಕಲಾ ಪ್ರಕಾರಗಳ ಕಲಾ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಇಲ್ಲಿನ ವಿದ್ಯಾರ್ಥಿಗಳ ಕೈಯಲ್ಲಿ ಮೂಡಿಬಂದ ಕಲೆಗಳ ಪ್ರದರ್ಶನ ನಡೆಯುತ್ತಿದೆ. ಕ್ಯಾನ್ವಸ್, ಪೆನ್ಸಿಲ್ ಶೇಡಿಂಗ್, ಚುಕ್ಕಿ ಚಿತ್ರ, ಪೋಸ್ಟರ್ ಕಲರ್ ಪೈಟಿಂಗ್, ಆಯಿಲ್ ಪೆಸ್ಟಲ್, ಆಯಿಲ್ ಪೈಟಿಂಗ್, ಜಲವರ್ಣ ಚಿತ್ರ, ಹೀಗೆ ವಿವಿಧ ಕಲಾ ಮಾಧ್ಯಮಗಳ ಚಿತ್ರಕಲೆಗಳಿವೆ.

ವಿಟ್ಲ ಪರಿಸದ ವಿದ್ಯಾರ್ಥಿಗಳ ಕಲಾಕುಂಚ
ತತ್ವ ಸ್ಕೂಲ್ ಆಫ್ ಆರ್ಟ್, ವಿಟ್ಲದ‌ ವಿದ್ಯಾರ್ಥಿಗಳಾದ ಪ್ರಥಮ್ ಕಾಮತ್, ಸಿ ಪ್ರನ್ವಿ ಕಾಮತ್, ಸಿಂಧೂರ, ಹನ್ಸಿಕಾ ವಿ‌ಎನ್, ಧಾತ್ರಿ ಹೆಚ್, ಎನ್ ನವ್ಯಾ ಭಟ್, ಅನ್ವಿ ಕೆ, ಪ್ರಾಪ್ತಿ ಡಿ ಎನ್, ಚಿನ್ಮಯಿ ಎಸ್ ಶೆಟ್ಟಿ, ಸುನಿಲ್ ಕುಮಾರ್, ಸ್ವಸ್ಥಿಕಾ, ಅಂಜಲಿ ಎಸ್ ಡಿ, ಸೃಜನ್, ಯಶ್ವಿತ್ ಇವರ ಆಯ್ದ ಕಲಾಕೃತಿಗಳ ಪ್ರದರ್ಶನ ನಡೆಯುತ್ತಿದೆ. ಮಂಗಳೂರಿನ ವರ್ಣ ಆರ್ಟ್ ಗ್ಯಾಲರಿಯಲ್ಲಿ ಅಕ್ಟೋಬರ್ ಅಂತ್ಯದವರೆಗೂ ಈ ಕಲಾ ಪ್ರದರ್ಶನವನ್ನು ವೀಕ್ಷಿಸಬಹುದು.‌

- Advertisement -

Related news

error: Content is protected !!