- Advertisement -
- Advertisement -
ಮಂಗಳೂರು: ನಗರ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಕೊರೋನಾ ಪೀಡಿತರಿಗೆ, ವಿವಿಧ ರೋಗಗಳಿಂದ ಬಳಲುತ್ತಿರುವವರ ಮನೆಗಳಿಗೆ ಭೇಟಿ ನೀಡಿ, ಅವರಿಗೆ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮವನ್ನು ವಿವರಿಸಿದರು.ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ದ.ಕ.ಜಿಲ್ಲಾ ಹೆಲ್ಪ್ ಲೈನ್ ನ ಸಂಚಾಲಕರಾದ ಶ್ರೀ ಐವನ್ ಡಿಸೋಜರವರು ವಿತರಿಸಿದರು.

ಕೊರೋನಾ ಪೀಡಿತರಾದವರು ಲಸಿಕೆಯನ್ನು ನೀಡುವ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರು ಮತ್ತು ಪೀಡಿತರಾದವರು ಮನೆಯಲ್ಲಿ ಇತರ ಸದಸ್ಯರಿಗೆ ರೋಗ ಹರಡದಂತೆ ಕ್ರಮ ತೆಗೆದುಕೊಳ್ಳಬೇಕೆಂದು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಪಡೀಲ್ ವಾರ್ಡಿನ ಶೋಭಾ ಕೇಶವ, ಹೆನ್ಸಿ ಡಿಸೋಜ, ಕೇಶವ ಮಾಜಿ ಕಾರ್ಪೊರೇಟರ್ ಭಾಸ್ಕರ್ ರಾವ್, ಜೋನ್ ಡಿಸೋಜ ಹಾಗೂ ಮುಂತಾದವರು ಉಪಸ್ಥಿತರಿದ್ದರು.



- Advertisement -








