Friday, April 26, 2024
spot_imgspot_img
spot_imgspot_img

ಮಾಣಿ: ಅವಘಡದಿಂದಲೇ ಮರಣಗಳು ಹೆಚ್ಚುತ್ತಿದೆ. ನಾವು ಒಳಿತಿನೆಡೆಗೆ ಧಾವಿಸೋಣ: ಅಶ್ರಫ್ ಸಖಾಫಿ ಸೂರಿಕುಮೇರು

- Advertisement -G L Acharya panikkar
- Advertisement -

ಮಾಣಿ: ಆಯುಷ್ಯ ಬಹಳ ಕಡಿಮೆ ಇದೆ. ಸಣ್ಣ ಸಣ್ಣ ಯುವಕರ ಮರಣಗಳೇ ಕೇಳಿ ಬರುತ್ತಿವೆ. ಅವಘಡ ಮರಣಗಳು ಹೆಚ್ಚುತ್ತಿವೆ. ಸಾಧ್ಯವಾದಷ್ಟು ಒಳಿತುಗಳನ್ನು ಹೆಚ್ಚಿಸಿರಿ. ದ್ಸಿಕ್ರ್ ಮಜ್ಲಿಸ್ ಗಳಲ್ಲಿ ಪಾಲ್ಗೊಂಡು ಪರಸ್ಪರ ದುಆ ಮಾಡಲು ಹೇಳುತ್ತಾ ಇರಿ. ಬರಾಅತ್ ನಂತಹಾ ಪುಣ್ಯ ರಾತ್ರಿಗಳನ್ನು ಆರಾಧನೆಯ ಮೂಲಕ ಜೀವಂತಗೊಳಿಸಿರಿ. ಉಲಮಾಗಳ ನೇತೃತ್ವದಲ್ಲಿ ಭದ್ರವಾಗಿ ನೆಲೆನಿಲ್ಲಿರಿ ಎಂದು ಉಸ್ತಾದ್ ಅಶ್ರಫ್ ಸಖಾಫಿ ಸೂರಿಕುಮೇರು ಹೇಳಿದರು.

ಅವರು ಎಸ್‌ವೈಎಸ್ ಹಾಗೂ ಎಸ್ಸೆಸ್ಸೆಫ್ ಸೂರಿಕುಮೇರು ಇದರ ವತಿಯಿಂದ ನಡೆದ ಮಹ್‌ಳರತುಲ್ ಬದ್ರಿಯಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಐಡಿ ಕಾರ್ಡ್ ವಿತರಣೆ, ಇಶಾರ ಚಂದಾ ಅಭಿಯಾನ ಮತ್ತು ಬರಾಅತ್ ಕೈಪಿಡಿ ವಿತರಣೆ ನಡೆಯಿತು.

driving

ಮುಖ್ಯ ಅತಿಥಿಯಾಗಿ ಎಸ್‌ವೈಎಸ್ ಮಾಣಿ ಸೆಂಟರ್ ಪ್ರಧಾನ ಕಾರ್ಯದರ್ಶಿ ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ, ಸೆಂಟರ್ ನಾಯಕರಾದ ಸುಲೈಮಾನ್ ಸೂರಿಕುಮೇರು, ಯೂಸುಫ್ ಹಾಜಿ ಸೂರಿಕುಮೇರು, ಅಬ್ಬಾಸ್ ಮಾಣಿ, ಹಮೀದ್ ಮಾಣಿ, ಅಬ್ದುಲ್ ಫತ್ತಾಹ್ ಮಾಣಿ,ಲತೀಫ್ ಮಾಣಿ, ನೌಶಾದ್ ಉಮರ್ ಸೂರಿಕುಮೇರು, ಇಮ್ರಾನ್ ಸೂರಿಕುಮೇರು, ಹಂಝ ಸೂರಿಕುಮೇರು, ಅಬ್ದುಲ್ ಖಾದರ್ ಬರಿಮಾರ್, ಮುಂತಾದವರು ಉಪಸ್ಥಿತರಿದ್ದರು, ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಸಲೀಂ ಮಾಣಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜಾಬಿರ್ ಸೂರಿಕುಮೇರು ಧನ್ಯವಾದಗೈದರು.

- Advertisement -

Related news

error: Content is protected !!