Wednesday, April 24, 2024
spot_imgspot_img
spot_imgspot_img

ಭಕ್ತಿಯಿಲ್ಲದ ಆರಾಧನೆ ಕಾರ್ಯಚಟುವಟಿಕೆಗಳು ನಿಷ್ಫಲ: ಇಸಾಕ್ ಫೈಝಿ ಉಚ್ಚಿಲ

- Advertisement -G L Acharya panikkar
- Advertisement -

ಬಂಟ್ವಾಳ: ನಾವು ನಡೆಸುವ ಯಾವುದೇ ಕಾರ್ಯಚಟುವಟಿಕೆಗಳಾಗಲಿ ಆರಾಧನೆಗಳಾಗಲಿ ಅದರಲ್ಲಿ ಭಯ,ಭಕ್ತಿ ಇಲ್ಲದೆ ಬರೇ ತೋರಿಕೆಗೆಯಾದರೆ ಅದರವಪ್ರತಿಫಲ ಶೂನ್ಯವಾಗಿರುತ್ತದೆ ಕೊರೋನಾ ಮಹಾಮಾರಿಯಿಂದ ಹಾಗೂ ಅದರ ಹೆಸರಿನಲ್ಲಿ ಸೃಷ್ಟಿಸಿದ ಭಯದಿಂದ ಜನರು ಕಂಗಾಲಾಗಿದ್ದಾರೆ ಅದರ ಕಾರಣದಿಂದ ನಡೆಯುತ್ತಿರುವ ಆನ್‌ಲೈನ್ ಕ್ಲಾಸ್ ಮಕ್ಕಳಿಗೆ ಶಾಪವಾಗಿ ಪರಿಣಮಿಸಿದೆ ಎಂದು ಇಸಾಕ್ ಫೈಝಿ ಹೇಳಿದರು.

ಅವರು ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ರಿ.) ಎಸ್‌ವೈಎಸ್ ಮಾಣಿ ಸೆಂಟರ್ ಇದರ ವತಿಯಿಂದ ಯೂಸುಫ್ ಹಾಜಿ ಸೂರಿಕುಮೇರು ರವರ ನಿವಾಸದಲ್ಲಿ ಆಯೋಜಿಸಿದ ಬೃಹತ್ ಜಲಾಲಿಯ್ಯಾ ರಾತೀಬ್ ಮಜ್ಲಿಸ್‌ಗೆ ನೇತೃತ್ವ ನೀಡಿ ಮುಖ್ಯ ಭಾಷಣ ಮಾಡಿದರು.

ದಾರುಲ್ ಇರ್ಶಾದ್ ಮುದರ್ರೀಸ್ ಯ‌ಕೂಬ್ ಸ‌ಅದಿ ಬೆಟ್ಟಂಪಾಡಿ ದುಆ ನಡೆಸಿದರು. ಕಾರ್ಯಕ್ರಮದಲ್ಲಿ ಎಸ್‌ವೈಎಸ್ ಮಾಣಿ ನಿಕಟ ಪೂರ್ವಾಧ್ಯಕ್ಷರಾದ ಅಬ್ದುಲ್ ರಜಾಕ್ ಮದನಿ ಕಾಮಿಲ್ ಸಖಾಫಿ ಸೂರಿಕುಮೇರು, ಹಿರಿಯ ಉಸ್ತಾದರಾದ ಇಸ್ಮಾಯಿಲ್ ಮದನಿ ನೇರಳಕಟ್ಟೆ,ಸೆಂಟರ್ ನಾಯಕರಾದ ಅಬ್ದುಲ್ ಲತೀಫ್ ಸ‌ಅದಿ ಶೇರಾ, ಸುಲೈಮಾನ್ ಸೂರಿಕುಮೇರು, ಹಬೀಬ್ ಶೇರಾ,ಅಬ್ದುಲ್ ಖಾದರ್ ಶೇರಾ,ಹಂಝ ಸೂರಿಕುಮೇರ್, ಎಸ್‌ವೈಎಸ್ ಸೂರಿಕುಮೇರು ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಸಲೀಂ ಮಾಣಿ ,ಅಬ್ಬಾಸ್ ಪಟ್ಲಕೋಡಿ, ದಾರುಲ್ ಇರ್ಶಾದ್ ಅರೇಬಿಕ್ ಶಾಲಾ ಮುಖ್ಯೋಪಾಧ್ಯಾಯ ನಝೀರ್ ಅಮ್ಜದಿ ಸರಳಿಕಟ್ಟೆ,ಇಬ್ರಾಹಿಂ ಮುಸ್ಲಿಯಾರ್ ಹಳೀರ,ಕರೀಂ ನೆಲ್ಲಿ ಮೊದಲಾದವರು ಉಪಸ್ಥಿತರಿದ್ದರು.

ಸೆಂಟರ್ ಕಾರ್ಯಕ್ರಮ ನಿರ್ವಹಣಾ ಕಾರ್ಯದರ್ಶಿ ಸ್ವಾದಿಖ್ ಪೇರಮೊಗರು ಸ್ವಾಗತಿಸಿದರು. ಸೆಂಟರ್ ಪ್ರಧಾನ ಕಾರ್ಯದರ್ಶಿ ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!