Thursday, April 25, 2024
spot_imgspot_img
spot_imgspot_img

ಮಾಣಿ: (ಸೆ.25)ರಂದು ಶ್ರೀ ಶಾರದಾ ಯುವ ವೇದಿಕೆ ಸೇವಾ ಟ್ರಸ್ಟ್‌(ರಿ)ಮಾಣಿ, ಶ್ರೀ ರಾಜರಾಜೇಶ್ವರಿ ಭಜನಾ ಮಂದಿರ ಇದರ ವತಿಯಿಂದ ಸಾರ್ವಜನಿಕ ಕಬಡ್ಡಿ ಪಂದ್ಯಾಟ ಹಾಗೂ ಹಗ್ಗಜಗ್ಗಾಟ

- Advertisement -G L Acharya panikkar
- Advertisement -

ಮಾಣಿ: ಶ್ರೀ ಶಾರದಾ ಯುವ ವೇದಿಕೆ ಸೇವಾ ಟ್ರಸ್ಟ್‌(ರಿ)ಮಾಣಿ, ಶ್ರೀ ರಾಜರಾಜೇಶ್ವರಿ ಭಜನಾ ಮಂದಿರ ಇದರ ವತಿಯಿಂದ ನಡೆಯುವ 42ನೇ ವರ್ಷದ ನವರಾತ್ರಿ ಮಹೋತ್ಸವದ ಅಂಗವಾಗಿ ಜರಗುವ ದಸರಾ ಕ್ರೀಡಾಕೂಟದ ಸಾರ್ವಜನಿಕ ಕಬಡ್ಡಿ ಪಂದ್ಯಾಟ ಹಾಗೂ ಹಗ್ಗಜಗ್ಗಾಟ ಸ್ಫರ್ಧೆಯು ದಿನಾಂಕ: 25-09-2022ರಂದು ಮಾಣಿ ಗಾಂಧಿ ಮೈದಾನದಲ್ಲಿ ನಡೆಯಲಿದೆ.

ಬೆಳಿಗ್ಗೆ9.00 ಗಂಟೆಗೆ ಸಚಿನ್‌ ರೈ ಮಾಣಿಗುತ್ತು, ಆಡಳಿತ ಮೊಕ್ತೇಸರರು ಶ್ರೀ ಉಳ್ಳಾಲ್ತಿ ದೈವಸ್ಥಾನ ಮಾಣಿ ಇವರು ಉದ್ಘಾಟನೆ ಮಾಡಲಿದ್ದಾರೆ.

ಹಿರಿಯರ ಕಬಡ್ಡಿ ಪಂದ್ಯಾಟದ ಬಹುಮಾನಗಳು ಪ್ರಥಮ 4001/-ನಗದು ಮತ್ತು ದ್ವಿತೀಯ 3001/-ನಗದು. ಹಗ್ಗಜಗ್ಗಾಟದ ಬಹುಮಾನ ಪ್ರಥಮ 2501/-ನಗದು ಮತ್ತು ದ್ವಿತೀಯ 2001/-ನಗದು. 9ನೆ ತರಗತಿಯಿಂದ ಪದವಿಯವರೆಗೆ ಕಬಡ್ಡಿ ಪಂದ್ಯಾಟದ ಬಹುಮಾನಗಳು ಪ್ರಥಮ 1501/- ದ್ವಿತೀಯ 1001/-ನಗದು. 1ನೇ ತರಗತಿಯಿಂದ 8ನೇ ತರಗತಿವರೆಗೆ ಕಬಡ್ಡಿ ಪಂದ್ಯಾಟದ ಬಹುಮಾನಗಳು ಪ್ರಥಮ 701/- ದ್ವಿತೀಯ301/- ನಗದು. ಮಧ್ಯಾಹ್ನ 2.00 ಗಂಟೆಗೆ ಮಹಿಳೆಯರಿಗೆ ಆಟೋಟ ಸ್ಪರ್ಧೆ ತ್ರೋಬಾಲ್‌, ಹಗ್ಗಜಗ್ಗಾಟ, ಸಂಗೀತ ಕುರ್ಚಿ, ಕ್ಯಾಂಡಲ್‌ ಉರಿಸುವ ಸ್ಫರ್ಧೆ ನಡೆಯಲಿದೆ.

ಸಂಜೆ ಗಂಟೆ 5.00ಕ್ಕೆ ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜೇಶ್‌ ನಾಯ್ಕ್‌ ಉಳಿಪ್ಪಾಡಿಗುತ್ತು, ಶಾಸಕರು ಬಂಟ್ವಾಳ ವಿಧಾನಸಭಾ ಕ್ಷೇತ್ರ ಇವರು ವಹಿಸಲಿದ್ದಾರೆ. ಅತಿಥಿಗಳಾಗಿ ಜಗದೀಶ್‌ ನೆತ್ತರಕೆರೆ, ಜಿಲ್ಲಾ ಸಂಯೋಜಕರು ಹಿಂದೂ ಜಾಗರಣಾ ವೇದಿಕೆ ಪುತ್ತೂರು ಜಿಲ್ಲೆ, ಪ್ರಶಾಂತ್‌ ಶೆಟ್ಟಿ, ಸೂರುಕುಮೇರು, ಆರ್‌.ಆರ್‌ ಅಲ್ಯುಮಿನಿಯಂ & ಇಂಟಿರಿಯರ್‍ಸ್‌ ಮಂಗಳೂರು ಇವರುಗಳು ಭಾಗವಹಿಸಲಿದ್ದಾರೆ.

astr
- Advertisement -

Related news

error: Content is protected !!