Thursday, March 28, 2024
spot_imgspot_img
spot_imgspot_img

ವಿಡಿಯೋ ಕಾನ್ಫರೆನ್ಸ್​ ಮೂಲಕ ದೇಶಾದ್ಯಂತ ಕೊರೊನಾ ವ್ಯಾಕ್ಸಿನೇಷನ್​​ಗೆ ಚಾಲನೆ ನೀಡಿದ ಪ್ರಧಾನಿ ಮೋದಿ

- Advertisement -G L Acharya panikkar
- Advertisement -

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ರವರು ವಿಡಿಯೋ ಕಾನ್ಫರೆನ್ಸ್​ ಮೂಲಕ ದೇಶಾದ್ಯಂತ ಕೊರೊನಾ ವ್ಯಾಕ್ಸಿನೇಷನ್​​ಗೆ ಚಾಲನೆ ನೀಡಿದರು. 3006 ವ್ಯಾಕ್ಸಿನೇಷನ್ ಕೇಂದ್ರಗಳಿಂದ ಒಟ್ಟು 3 ಲಕ್ಷ ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ.

ಮೊದಲ ಹಂತದಲ್ಲಿ ಹೆಲ್ತ್​​ ವರ್ಕರ್ಸ್​​, ಪೌರಕಾರ್ಮಿಕರು, ಫ್ರಂಟ್​​ಲೈನ್ ವರ್ಕರ್ಸ್​​ಗೆ ವ್ಯಾಕ್ಸಿನ್ ನೀಡಲಾಗುತ್ತಿದೆ. ಕೊರೊನಾ ವಾರಿಯರ್ಸ್​ಗೆ ಲಸಿಕೆ ನೀಡಲಾಗುತ್ತಿದ್ದಂತೆ, ಇದೀಗ ಸಾಮಾನ್ಯ ಜನರಿಗೆ ಲಸಿಕೆ ಯಾವಾಗ ಲಭ್ಯವಾಗುತ್ತೆ ಅನ್ನೋ ಪ್ರಶ್ನೆ ಕೇಳಿಬರುತ್ತಿದೆ.

ದೇಶದ ರೋಗ ನಿರೋಧಕ ಅಧಿಕಾರಿ ಡಾ.ದಿಲೀಪ್ ಪಾಟಿಲ್ ಹೇಳುವ ಪ್ರಕಾರ ಇನ್ನೂ 6-7 ತಿಂಗಳ ಒಳಗಾಗಿ ಕೊರೊನಾ ಲಸಿಕೆ ಸಾಮಾನ್ಯ ಜನರಿಗೆ ಲಭ್ಯವಾಗಲಿದೆ. ಸೆಪ್ಟೆಂಬರ್ ಆರಂಭದಲ್ಲಿ ವ್ಯಾಕ್ಸಿನ್ ಸಿಗುವ ಸಾಧ್ಯತೆ ಇದೆ. ಭಾರತ ಸರ್ಕಾರ ಸೆಪ್ಟೆಂಬರ್ ಅಂತ್ಯದೊಳಗೆ 30 ಕೋಟಿ ಜನರಿಗೆ ಕೊರೊನಾ ಲಸಿಕೆಯನ್ನು ನೀಡುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

- Advertisement -

Related news

error: Content is protected !!