Tuesday, July 28, 2026
spot_imgspot_img
spot_imgspot_img

ಕಳ್ಳಂಬೆಳ್ಳ ಚೆಕ್ ಪೋಸ್ಟ್‌ನಲ್ಲಿ ಭಾರಿ ಮೊತ್ತದ ನಗದು ವಶಕ್ಕೆ!!!

- Advertisement -
- Advertisement -

ತುಮಕೂರು: ಶಿರಾ ತಾಲ್ಲೂಕು ಕಳ್ಳಂಬೆಳ್ಳ ಚೆಕ್ ಪೋಸ್ಟ್‌ನಲ್ಲಿ ಚುನಾವಣಾ ಸಿಬ್ಬಂದಿ ₹64,40,000 ನಗದು ವಶ ಪಡಿಸಿಕೊಂಡಿದ್ದಾರೆ.
ಖಾಸಗಿ ವಾಹನದಲ್ಲಿ ಈ ಹಣ ಇತ್ತು.

ಬೆಂಗಳೂರಿನಿಂದ ಚನ್ನಗಿರಿಗೆ ಹಣ ಕೊಂಡೊಯ್ಯಲಾಗುತ್ತಿತ್ತು ಎಂದು ವಾಹನದಲ್ಲಿ ಇದ್ದವರು ತಿಳಿಸಿದ್ದಾರೆ‌. ಹಣದ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಚುನಾವಣಾ ಸಿಬ್ಬಂದಿ ಮಾಹಿತಿ ನೀಡಿದ್ದಾರೆ‌. ಖಜಾನೆಯಲ್ಲಿ ಹಣವನ್ನು ಇರಿಸಲಾಗಿದೆ. ವಾಹನದಲ್ಲಿ ಯಾವುದೇ ಪಕ್ಷದ ಪ್ರಚಾರ ಸಾಮಗ್ರಿ ಇರಲಿಲ್ಲ.


ಚುನಾವಣಾ ಅಧಿಕಾರಿ ನಂದಿನಿದೇವಿ, ಸಹಾಯಕ ಚುನಾವಣಾ ಅಧಿಕಾರಿ ಮಮತಾ, ಕೇಂದ್ರ ಚುನಾವಣಾ ಆಯೋಗದ ವೆಚ್ಚ ವೀಕ್ಷಕ ಮೃತ್ಯುಂಜಯ ಸೇನಿ ಚೆಕ್ ಪೋಸ್ಟ್‌ಗೆ ಭೇಟಿ ನೀಡಿದ್ದಾರೆ.

- Advertisement -

Related news

error: Content is protected !!