Wednesday, April 24, 2024
spot_imgspot_img
spot_imgspot_img

ಮೂಡುಬಿದ್ರೆ: ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದು ಮೃತಪಟ್ಟ ಬಾಲಕಿ!

- Advertisement -G L Acharya panikkar
- Advertisement -

ಮೂಡುಬಿದ್ರೆ: ಬಾಲಕಿಯೊಬ್ಬಳು ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಮೂಡುಬಿದಿರೆಯ ತೋಡಾರು ಸಮೀಪದ ಹಂಡೇಲಿನಲ್ಲಿ ನಡೆದಿದೆ.

ಮೃತಪಟ್ಟ ಬಾಲಕಿ ಹಂಡೇಲು ನಿವಾಸಿ ಅಬುಸ್ವಾಲಿಹ್ ಅವರ ಪುತ್ರಿ ಆಜ್ಮಾ ಫಾತಿಮಾ(5).

ಮೃತ ಬಾಲಕಿಯ ತಂದೆ ಅಬುಸ್ವಾಲಿಹ್ ಅವರಿಗೆ ಅವಳಿ-ಜವಳಿ ಹೆಣ್ಣುಮಕ್ಕಳು. ಇಂದು ಬಾಲಕಿಯ ಅಜ್ಜ ಇಬ್ಬರೂ ಮಕ್ಕಳನ್ನು ಅಂಗಡಿಗೆ ಕರೆದುಕೊಂಡು ಹೋಗಿದ್ದಾರೆ. ಅಂಗಡಿಯಿಂದ ವಾಪಸ್ ಬರುತ್ತಿದ್ದ ವೇಳೆ ದೇವಿನಗರ ಕ್ರಾಸ್ ಬಳಿ ಬಾಲಕಿ ಆಜ್ಮಾ ಅಜ್ಜನ ಕೈ ಬಿಟ್ಟು ರಸ್ತೆಗೆ ಓಡಿ ಬಂದಿದ್ದಾಳೆ. ಈ ವೇಳೆ ಮಂಗಳೂರಿನಿಂದ ವೇಗವಾಗಿ ಬರುತ್ತಿದ್ದ ಕಾರು ಬಾಲಕಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಗಂಭೀರ ಗಾಯಗೊಂಡಿದ್ದಾಳೆ. ಬಾಲಕಿಯನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರು ಆದರೆ ಮಾರ್ಗಮಧ್ಯೆಯಲ್ಲಿ ಕೊನೆಯುಸಿರೆಳೆದಿದ್ದಾಳೆ ಎಂದು ತಿಳಿದುಬಂದಿದೆ. ಈ ಘಟನೆಯ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!