Sunday, July 19, 2026
spot_imgspot_img
spot_imgspot_img

ವಿಶ್ವವಿದ್ಯಾನಿಲಯ ಕಾಲೇಜು, ನೆಲ್ಯಾಡಿಯಲ್ಲಿ ಕಾಲೇಜು ವಾರ್ಷಿಕೋತ್ಸವ ಹಾಗೂ ಪ್ರತಿಭೋತ್ಸವ

- Advertisement -
- Advertisement -

ನೆಲ್ಯಾಡಿ: ವಿಶ್ವವಿದ್ಯಾನಿಲಯ ಕಾಲೇಜು, ನೆಲ್ಯಾಡಿಯಲ್ಲಿ ಕಾಲೇಜು ವಾರ್ಷಿಕೋತ್ಸವ ಹಾಗೂ ಪ್ರತಿಭೋತ್ಸವವು ಮೇ 27 ಬುಧವಾರದಂದು ಪೂರ್ವಾಹ್ನ 10ಗಂಟೆಗೆ ಸಂತ ಜಾರ್ಜ್ ಶಾಲಾ ಸಭಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ। ಸುರೇಶ್ ಸಂಯೋಜಕರು, ವಿ. ವಿ. ಕಾಲೇಜು, ನೆಲ್ಯಾಡಿ ಇವರು ವಹಿಸಲಿದ್ದಾರೆ, ಕಾರ್ಯಕ್ರಮದ ಅತಿಥಿಗಳಾಗಿ ಅಬ್ರಹಾಂ ವರ್ಗಿಸ್, ಸ್ಥಾಪಕ ಕಾರ್ಯದರ್ಶಿಗಳು ಸಂತ ಜಾರ್ಜ್ ವಿದ್ಯಾಸಂಸ್ಥೆಗಳು ನೆಲ್ಯಾಡಿ, ಶ್ರೀಮತಿ ಉಷಾ ಅಂಚನ್ ಅಧ್ಯಕ್ಷರು, ಅನುಷ್ಠಾನ ಸಮಿತಿ ವಿ. ವಿ. ಕಾಲೇಜು ನೆಲ್ಯಾಡಿ, ಪಿ. ಪಿ. ವರ್ಗಿಸ್,ಗೌರವ ಸಲಹೆಗಾರರು ಅನುಷ್ಠಾನ ಸಮಿತಿ ವಿ. ವಿ. ಕಾಲೇಜು ನೆಲ್ಯಾಡಿ, ವಿಶ್ವನಾಥ ಶೆಟ್ಟಿ ಪ್ರಾಂಶುಪಾಲರು ಸರಕಾರಿ ಪದವಿಪೂರ್ವ ಕಾಲೇಜು, ಕೊಕ್ಕಡ, ಎಲಿಯಾಸ್ ಎಂ. ಕೆ. ಪ್ರಾಂಶುಪಾಲರು ಸಂತ ಜಾರ್ಜ್ ಪದವಿ ಪೂರ್ವ ಕಾಲೇಜು ನೆಲ್ಯಾಡಿ, ಗೋಪಾಲ ಗೌಡ ಅಧ್ಯಕ್ಷರು ಶಾಲಾಭಿವೃದ್ಧಿ ಸಮಿತಿ ದ.ಕ.ಜಿ.ಪಂ. ಉನ್ನತೀಕರಿಸಿದ ಹಿ. ಪ್ರಾ. ಶಾಲೆ ಗೋಳಿತ್ತೊಟ್ಟು, ಉಮ್ಮರ್ ಬೈಲಂಗಡಿ ಅಧ್ಯಕ್ಷರು ಶಿಕ್ಷಕ ರಕ್ಷಕ ಸಂಘ ವಿ. ವಿ. ಕಾಲೇಜು ನೆಲ್ಯಾಡಿ ಇವರು ಭಾಗವಹಿಸಲಿದ್ದಾರೆ.

ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದೆ.

- Advertisement -

Related news

error: Content is protected !!