Wednesday, April 24, 2024
spot_imgspot_img
spot_imgspot_img

ಸುಳ್ಯ: ತಂದೆ-ಮಗಳ ಫೋಟೋ ವೈರಲ್: ನೆಟ್‌ವರ್ಕ್ ಸಮಸ್ಯೆಗೆ ದೊರೆತ ಪರಿಹಾರ

- Advertisement -G L Acharya panikkar
- Advertisement -

ಮಂಗಳೂರು: ಮಳೆಯಲ್ಲೇ ರಸ್ತೆ ಬದಿ ಕುಳಿತು ಆನ್‌ಲೈನ್ ಕ್ಲಾಸ್ ಕೇಳುತ್ತಿದ್ದ ಮಗಳಿಗೆ ಮಳೆಯಿಂದ ರಕ್ಷಿಸಲು ತಂದೆ ಛತ್ರಿ ಹಿಡಿದು ನಿಂತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮ ಮೊಗ್ರದ ಬಳ್ಳಕ್ಕ ವಿದ್ಯಾರ್ಥಿಗಳಿಗೆ ನೆಟ್‌ವರ್ಕ್ ಸಮಸ್ಯೆ ರಾಷ್ಟ್ರಾದ್ಯಾಂತ ಸುದ್ದಿಯಾದ ಬಳಿಕ ಊರಿನ ಜನರೇ ಮಕ್ಕಳ ಸಮಸ್ಯೆ ನೀಗಿಸಲು ಮುಂದಾಗಿದ್ದಾರೆ. ಭಾರೀ ಗಾಳಿ ಮಳೆಗೆ ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದು ಗುಡ್ಡದ ಮೇಲಿನ ರಸ್ತೆಯಲ್ಲಿ ಇಡೀ ದಿನ ಕೂತು ಆನ್ ಲೈನ್ ಕ್ಲಾಸ್‌ಗೆ ಹಾಜರಾಗುತ್ತಿದ್ದರು. ಭಾರೀ ಮಳೆಗೆ ವಿದ್ಯಾರ್ಥಿಗಳಿಗೆ ಪೋಷಕರು ಸ್ವತಃ ಛತ್ರಿಯ ಆಸರೆ ನೀಡುತ್ತಿದ್ದು, ಗಾಳಿ ಮಳೆಗೆ ರಸ್ತೆಯಲ್ಲಿಯೇ ನಿಂತು ಪಾಠ ಕೇಳಬೇಕಾದ ಅನಿವಾರ್ಯತೆ ಇದೆ.

ಕೇಂದ್ರ ಸರಕಾರವು ಸಾರ್ವಜನಿಕ ವೈಫೈ ನೀಡಲು ಪಿಎಂ ವಾಣಿ ಎಂಬ ಯೋಜನೆಯಲ್ಲಿ ಕಳೆದ ಡಿಸೆಂಬರ್ ನಲ್ಲಿ ಟೆಲಿಕಾಂ ಇಲಾಖೆಯ ಮೂಲಕ ವ್ಯವಸ್ಥೆಗೆ ಮುಂದಾಗಿತ್ತು. ದೇಶದ ಹಲವು ಕಡೆಗಳಲ್ಲಿ ಈ ಯೋಜನೆಯನ್ನು ಜಾರಿ ಮಾಡಲು ಕೂಡ ಸೂಚಿಸಿತ್ತು. ಇದರ ಅನ್ವಯ ಟೆಲಿಕಾಂ ಇಲಾಖೆಗಳನ್ನು ಸಂಪರ್ಕಿಸಿದ ಸುಳ್ಯದ ಸಾಯಿರಂಜನ್ ಕಲ್ಚಾರು ಹಾಗೂ ಸದಾಶಿವ ಕೊಡಪ್ಪಾಲ ಅವರು ಇದಕ್ಕೆ ಬೇಕಾದ ವ್ಯವಸ್ಥೆಗೆ ಮುಂದಾಗಿದ್ದಾರೆ. ಇಲಾಖೆಗಳನ್ನು, ವ್ಯವಸ್ಥೆಗಳನ್ನು ದೂರುತ್ತಾ ಕೂರುವ ಬದಲು ಇರುವ ವ್ಯವಸ್ಥೆಗಳನ್ನು ಹೇಗೆ ಬಳಕೆ ಮಾಡಬಹುದು ಹಾಗೂ ಸುಧಾರಿಸಬಹುದು ಎಂದು ಈ ಯುವಕರಿಬ್ಬರು ಯೋಚಿಸಿದ್ದಾರೆ.

ಸುಳ್ಯದಲ್ಲಿ ವಿದ್ಯಾರ್ಥಿನಿ ಆನ್‌ಲೈನ್ ಕ್ಲಾಸ್ ವೀಕ್ಷಣೆ

ಈಗ ಗ್ರಾಮೀಣ ಭಾಗಗಳಲ್ಲಿ ವಿದ್ಯಾರ್ಥಿಗಳು ಆನ್ ಲೈನ್ ಕ್ಲಾಸಿಗೆ ಪರದಾಟ ನಡೆಸುವ ಸ್ಥಿತಿಯನ್ನು ಕಂಡು ತಕ್ಷಣವೇ ಇಲಾಖೆಗಳಿಂದ ಅನುಮತಿ ಪಡೆದು ಇದೀಗ ಸುಳ್ಯದ ಕಮಿಲದಲ್ಲಿ ಈ ವ್ಯವಸ್ಥೆಗೆ ಮುಂದಾಗಿದ್ದಾರೆ. ಈ ನೆಟ್‌ವರ್ಕ್ ಗೆ ಏಕಾನೆಟ್ ಎಂಬ ಹೆಸರು ಇಡಲಾಗಿದೆ. ಸದ್ಯ ಸುಮಾರು 2000 ಚದರ ಅಡಿಯಲ್ಲಿ ಈ ಸಿಗ್ನಲ್ ಲಭ್ಯವಿರುತ್ತದೆ. ತೀರಾ ಅಗತ್ಯ ಇರುವ ವಿದ್ಯಾರ್ಥಿಗಳಿಗೆ, ತುರ್ತು ಇಂಟರ್ನೆಟ್ ಅಗತ್ಯ ಇರುವವರಿಗೆ, ವರ್ಕ್ ಫ್ರಂ ಹೋಂ ವ್ಯವಸ್ಥೆಯ ಮಂದಿಗೆ ಈ ಸಾರ್ವಜನಿಕ ವೈಫೈ ಬಳಕೆ ಮಾಡಬಹುದು.

ಈ ಯೋಜನೆಯಲ್ಲಿ ಸುಧಾರಣೆಗೆ ಸಾಕಷ್ಟು ಅವಕಾಶಗಳು ಇದ್ದು ನೆಟ್‌ವರ್ಕ್ ಲೋಪದೋಷಗಳ ಕಡೆಗೂ ಗಮನಹರಿಸಲಾಗುತ್ತಿದೆ. ಕಮಿಲದಲ್ಲಿ ಬಿ.ಎಸ್.ಎನ್.ಎಲ್ ಭಾರತ್ ಏರ್ ಫೈಬರ್ ಮೂಲಕ ಇಂಟರ್ನೆಟ್ ಸಂಪರ್ಕ ಪಡೆದು ಪ್ರತ್ಯೇಕ ಡಿವೈಸ್ ಮೂಲಕ ಸಾರ್ವಜನಿಕ ವೈ ಫೈ ನೀಡಲಾಗುತ್ತಿದೆ.

ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕೈ ಕೊಡುವ ಸಂದರ್ಭ ನೆಟ್ವರ್ಕ್ ಸಮಸ್ಯೆ ಹೆಚ್ಚಾಗುತ್ತದೆ, ಆದರೆ ಭಾರತ್ ಏರ್ ಫೈಬರ್ ಅಥವಾ ಫೈಬರ್ ವ್ಯವಸ್ಥೆಗಳು ಪ್ರತ್ಯೇಕ ಬ್ಯಾಟರಿಯಿಂದ ಚಾಲೂಗೊಳ್ಳುವ ಕಾರಣದಿಂದ ಸದ್ಯಕ್ಕೆ ಬಿ.ಎಸ್.ಎನ್.ಎಲ್ ಇತರ ಸಮಸ್ಯೆಗಳು ಮಾತ್ರ ಅಡಚಣೆಗೆ ಕಾರಣವಾದೀತು ಎನ್ನಲಾಗಿದೆ. ಈ ವೈಫೈ ತಾಲೂಕಿನ ವಿವಿಧ ಕಡೆಗಳಲ್ಲಿ ಒಂದೇ ಹೆಸರಿನಲ್ಲಿ ಅಳವಡಿಕೆಯಾದರೆ ರೋಮಿಂಗ್ ಮೂಲಕವೂ ಪಡೆಯಲು ಸಾಧ್ಯವಿದೆ.

- Advertisement -

Related news

error: Content is protected !!